ಸೋನಮ್ ಕಪೂರ್ ಮಗುವಾಗಿದ್ದಾಗ ಎತ್ತಿ ಹಿಡಿದಿರುವ ಅನಿಲ್ ಕಪೂರ್ (ಕೃಪೆ: ಸೋನಮ್ ಕಪೂರ್ ಇನ್ಸ್ಟಾಗ್ರಾಮ್ ಖಾತೆ) 
ಬಾಲಿವುಡ್

ನಿಮ್ಮ ಮಗಳಾಗಿರುವುದಕ್ಕೆ ಹೆಮ್ಮೆಯಿದೆ: ಅನಿಲ್ ಕಪೂರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸೋನಮ್

ಅನಿಲ್ ಕಪೂರ್ ಅವರ ೬೦ ನೇ ಹುಟ್ಟುಹಬ್ಬಕ್ಕೆ ಎಲ್ಲ ಕಡೆಯಿಂದ ಶುಭಾಶಯಗಳ ಮಾಹಾಪೂರ ಹರಿದುಬರುತ್ತಿದೆ. ನಿಮ್ಮ ಮಗಳಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಸೋನಮ್ ಕಪೂರ್ ಶನಿವಾರ

ಮುಂಬೈ: ಅನಿಲ್ ಕಪೂರ್ ಅವರ ೬೦ ನೇ ಹುಟ್ಟುಹಬ್ಬಕ್ಕೆ ಎಲ್ಲ ಕಡೆಯಿಂದ ಶುಭಾಶಯಗಳ ಮಾಹಾಪೂರ ಹರಿದುಬರುತ್ತಿದೆ. ನಿಮ್ಮ ಮಗಳಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಸೋನಮ್ ಕಪೂರ್ ಶನಿವಾರ ಹೇಳಿದ್ದಾರೆ. 
ಅನಿಲ್ ಮಗುವನ್ನು ಕೈನಲ್ಲಿ ಹಿಡಿದಿರುವ ತಮ್ಮ ಬಾಲ್ಯದ ಫೋಟೋವನ್ನು ಸೋನಮ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. "ಯಾರೇ ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅದ್ಭುತ ಉಡುಗೊರೆಯನ್ನು ನನ್ನ ತಂದೆ ನನಗೆ ನೀಡಿದ್ದಾರೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು - ಜಿಮ್ ವಾಲ್ವನೋ. ಅಪ್ಪ ಹುಟ್ಟುಹಬ್ಬದ ಶುಭಾಶಗಳು! ನಿಮ್ಮ ಮಗಳಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ನಿಮಗೆ ಪ್ರತಿದಿನ ಹೆಮ್ಮೆ ತಂದುಕೊಡುವುದಕ್ಕೆ ಪ್ರಯತ್ನಿಸುತ್ತೇನೆ. ಪ್ರೀತಿಯಿಂದ" ಎಂದು ಕೂಡ ಸೋನಮ್ ಬರೆದಿದ್ದಾರೆ. 
ಹಾಗೆಯೇ ಅನಿಲ್ ಕಪೂರ್ ಅವರೊಂದಿಗೆ ೩೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ನಟ ಅನುಪಮ್ ಖೇರ್ ಕೂಡ ಈ ಸಂದರ್ಭದಲ್ಲಿ ಶುಭಾಶಯ ಕೋರಿದ್ದಾರೆ. "ಆತ್ಮೀಯ ಅನಿಲ್ ಕಪೂರ್, ಸಂಪೂರ್ಣ ವ್ಯಕ್ತಿ ಯಾರಾದರೂ ಇದ್ದರೆ ನೀವು ಅದಕ್ಕೆ ಬಹಳ ಹತ್ತಿರವಿದ್ದೀರ. ಅದ್ಭುತ ನಟ, ಅತ್ಯುತ್ತಮ ಕೌಟುಂಬಿಕ ವ್ಯಕ್ತಿ ಮತ್ತು ಆತ್ಮೀಯ ಗೆಳೆಯ. ಹುಟ್ಟು ಹಬ್ಬದ ಶುಭಾಶಗಳು" ಎಂದು ಅನುಪಮ್ ಟ್ವೀಟ್ ಮಾಡಿದ್ದಾರೆ. 
'ಓಂ ಜೈ ಜಗದೀಶ್', 'ಹಮಾರಾ ದಿಲ್ ಆಪ್ಕೆ ಪಾಸ್ ಹೈ', 'ಹಮ್ ಆಪ್ಕೆ ದಿಲ್ ಮೇ ರೆಹ್ತೆ ಹೈ', 'ದಿವಾನ ಮಸ್ತಾನ', 'ಜೂಟ್ ಭೋಲೆ ಕವ್ವ ಕಾಟೆ', '೧೯೪೨-ಎ ಲವ್ ಸ್ಟೋರಿ', 'ರೂಪ್ ಕಿ ರಾಣಿ ಚೋರೊಂಕ ರಾಜ', 'ಬೇಟಾ', 'ರಾಮ್ ಲಖನ್', 'ತೇಜಾಬ್' ಮುಂತಾದ ಚಿತ್ರಗಳಲ್ಲಿ ಈ ಇಬ್ಬರೂ ನಟರು ಒಟ್ಟಿಗೆ ನಟಿಸಿದ್ದಾರೆ. 
ಅನಿಲ್ ಕಪೂರ್ ಅವರು ಮಣಿರತ್ನಂ ನಿರ್ದೇಶನದ ಕನ್ನಡ ಸಿನೆಮಾ 'ಪಲ್ಲವಿ ಅನುಪಲ್ಲವಿ' ಸಿನೆಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು ಎಂಬುದು ವಿಶೇಷ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲೇ ಮೊದಲು: ಪ್ರತಿಭಟಿಸುವುದಾದರೆ ಸದನದ ಬಾವಿಗೆ ಬನ್ನಿ; ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ; ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ; Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!