ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.
ದೇಶಾದ್ಯಂತ ಕಳೆದ ಶುಕ್ರವಾರ ಬಿಡುಗಡೆಯಾದ ದಂಗಲ್ ಚಿತ್ರ ಮೂರನೇ ದಿನದಲ್ಲಿ 100 ಕೋಟಿ ಗಳಿಸಿ 100 ಕೋಟಿ ಕ್ಲಬ್ ಸೇರಿದೆ. ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದರು.
ಕುಸ್ತಿಪಟು ಮಹವೀರ್ ಸಿಂಗ್ ಪೋಗಾಟ್ ಅವರ ಜೀವನಾಧಾರಿತ ಚಿತ್ರ ದಂಗಲ್ ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದಿದೆ.
ಬಿಡುಗಡೆಯಾದ ಮೊದಲ ದಿನ ಚಿತ್ರ 29.78 ಕೋಟಿ, ಎರಡನೇ ದಿನ 34.82 ಕೋಟಿ, ಮೂರನೇ ದಿನ 42.35 ಕೋಟಿ ಗಳಿಸಿದ್ದು ಒಟ್ಟಾರೆ 106 ಕೋಟಿ ರುಪಾಯಿ ಕಲೆ ಹಾಕಿದೆ.