ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ 
ಬಾಲಿವುಡ್

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಸಂಬಂಧ ಮುರಿದುಬಿತ್ತೆ?

ಈ ವರ್ಷ ಸೆಲೆಬ್ರಿಟಿ ಜೋಡಿಗಳ ಬ್ರೇಕಪ್ ನಿಲ್ಲುವಂತೆ ಕಾಣುತ್ತಿಲ್ಲ. ಜೋಡಿಹಕ್ಕಿಗಳಾಗಿ ಸುತ್ತಾಡುತ್ತಿದ್ದವರು ಇದೀಗ ನಾನೊಂದು...

ಮುಂಬೈ: ಈ ವರ್ಷ ಸೆಲೆಬ್ರಿಟಿ ಜೋಡಿಗಳ ಬ್ರೇಕಪ್ ನಿಲ್ಲುವಂತೆ ಕಾಣುತ್ತಿಲ್ಲ. ಜೋಡಿಹಕ್ಕಿಗಳಾಗಿ ಸುತ್ತಾಡುತ್ತಿದ್ದವರು ಇದೀಗ ನಾನೊಂದು ತೀರ...ನೀನೊಂದು ತೀರ ಅಂತ ಮುನಿಸಿಕೊಂಡು ದೂರವಾಗುತ್ತಿದ್ದಾರೆ. ಇದೀಗ ಅನುಷ್ಕಾ ಶರ್ಮ-ವಿರಾಟ್ ಕೊಹ್ಲಿ ಜೋಡಿ ಸಹ ದೂರವಾಗುತ್ತಿದೆಯೇ ಅನ್ನುವ ಗುಸುಗುಸು ಬಿ-ಟೌನ್ ನಲ್ಲಿ ಹರಿದಾಡುತ್ತಿದೆ.

ಇನ್‌ಸ್ಟಾ ಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಪರಸ್ಪರರನ್ನು ಅನುಸರಿಸುವುದನ್ನು ನಿಲ್ಲಿಸಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣ ಬಳಕೆದಾರ ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಬಹುಶಃ ಈ ಸುಳಿವಿನಿಂದಾಗಿಯೇ ಈ ಜೋಡಿ ಈಗಾಗಲೇ ಪ್ರತ್ಯೇಕಗೊಂಡಿರಬಹುದೆಂಬ ಸಂಶಯ ಅಭಿಮಾನಿಗಳನ್ನು ಕಾಡತೊಡಗಿದೆ.ಇದು ನಿಜವೋ ಸುಳ್ಳೋ ಎಂಬುದು ಖಚಿತವಿಲ್ಲ.

ಆದರೆ ಒಬ್ಬ ಅಭಿಮಾನಿ ಗಮನಿಸಿದ ಪ್ರಕಾರ, ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಂ ಖಾತೆ, ತಾಂತ್ರಿಕ ತೊಂದರೆಯಿಂದಾಗಿ ಅವರು ಹೆಚ್ಚಾಗಿ ಸಂದೇಶ ಕಳುಹಿಸುತ್ತಿದ್ದ ಮತ್ತು ಬರುತ್ತಿದ್ದ ಖಾತೆ ಅನ್ ಫಾಲೋ ಆಗಿತ್ತು, ಅಥವಾ ಬ್ಲಾಕ್ ಆಗಿತ್ತು. ಹೀಗೆಂದು ವೆಬ್ ಸೈಟ್ ವರದಿ ಮಾಡಿದೆ.

ಸ್ಪಾಟ್‌ಬಾಯ್‌ ಡಾಟ್‌ ಕಾಮ್‌ ಜಾಲ ತಾಣದ ವರದಿ ಪ್ರಕಾರ, ಈ ವರ್ಷದೊಳಗೆ ಮದುವೆಯಾಗುವ ಕೊಹ್ಲಿ ಅವರ ಪ್ರಸ್ತಾವವನ್ನು ಅನುಷ್ಕಾ ತಿರಸ್ಕರಿಸಿದ್ದಾಳೆ. ಆಕೆ ತನ್ನ ವೃತ್ತಿ ಬಗ್ಗೆ ಹೆಚ್ಚು ಗಂಭೀರವಾಗಿದ್ದಾಳೆ. ಹಾಗಾಗಿ 2017ಕ್ಕೆ ಮೊದಲು ಮದುವೆ ಇಲ್ಲ ಅಂತ ಹೇಳಿದ್ದಾಳಂತೆ. ಇದಕ್ಕಾಗಿ ಕೊಹ್ಲಿ ಬೇಸರಗೊಂಡು ಆಕೆಯಿಂದ ದೂರವಾಗಿದ್ದಾನೆ ಅನ್ನುವುದು ವದಂತಿ.

ಇತ್ತ ಇದಕ್ಕಾಗಿಯೇ ಕೊಹ್ಲಿ ಕೂಡ ಕ್ರಿಕೆಟ್ ಮೇಲೆಯೇ ಹೆಚ್ಚು ಗಮನ ಕೊಡುತ್ತಿದ್ದಾನಂತೆ. ಅನುಷ್ಕಾಳನ್ನು ಮಾತನಾಡಿಸುವ ಗೋಜಿಗೆ ಕೂಡ ಹೋಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈಚೆಗೆ ಟಿ-20ಯಲ್ಲಿ ಚೆನ್ನಾಗಿ ಆಡುತ್ತಿದ್ದಾನೆ ಅಂತ ಕ್ರಿಕೆಟ್ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ-Video

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

ಕೇರಳದಲ್ಲಿ ಭಾರಿ ಮಳೆಯಿಂದ ಭೂಕುಸಿತ; ಮೂವರು ಸಾವು! ಹಲವು ಜಿಲ್ಲೆಗಳಿಗೆ IMD 'ರೆಡ್ ಅಲರ್ಟ್' ಘೋಷಣೆ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!

Ramayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!