ನಟಿ ದೀಪಿಕ ಪಡುಕೋಣೆ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವುದು ತಿಳಿದ ವಿಚಾರವೇ. ವಿನ್ ಡೀಸೆಲ್ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ದೀಪಿಕಾ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿನ್ ಡಿಸೇಲ್ ಜತೆಗಿನ ಕೆಲವೊಂದು ಫೋಟೋ ಇದೀಗ ಬಿಡುಗಡೆಗೊಂಡಿದೆ.
ಚಿತ್ರದ ಶೂಟಿಂಗ್ ಗಾಗಿ ಇತ್ತೀಚೆಗಷ್ಟೇ ದೀಪಿಕ ಕೆನಡಾಕ್ಕೆ ಹಾರಿದ್ದರು. ಇದೀಗ ವಿನ್ ಡಿಸೇಲ್ ಮತ್ತು ದೀಪಿಕಾ ಚಿತ್ರೀಕರಣದಲ್ಲಿ ತೊಡಗಿದ್ದು. ಈ ಸಂಬಂಧ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫೋಟೋದಲ್ಲಿ ದೀಪಿಕಾ ಹಾಗೂ ವಿನ್ ಡಿಸೇಲ್ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಝೆಂಡರ್ ಕೇಜ್ ಎಂದು ಹೆಸರಿಡಲಾಗಿದೆ. ಇದಕ್ಕೂ ಮುನ್ನ ದೀಪಿಕಾ ವಿನ್ ಡಿಸೇಲ್ ನನ್ನು ತಬ್ಬಿಕೊಂಡಿರುವ ಫೋಟೋವನ್ನು ಇನ್ಸ್ಟಗ್ರಾಮ್ ನಲ್ಲಿ ಹಾಕಿಕೊಂಡಿದ್ದರು. ಚಿತ್ರದಲ್ಲಿ ದೀಪಿಕ ಸೆರೆನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ನಿರ್ದೇಶಕ ಡಿಜೆ ಕ್ಯಾರುಸೋ ಚಿತ್ರದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ.