ನೀರ್ಜಾ ಹಿಂದಿ ಚಿತ್ರದಲ್ಲಿ ಮುಸ್ಲಿಂರನ್ನು, ಪಾಕಿಸ್ತಾನವನ್ನು ಅವಹೇಳನಕಾರಿಯಾಗಿ ಚಿತ್ರೀಸಲಾಗಿದೆ ಎಂದು ಪಾಕಿಸ್ತಾನದಲ್ಲಿ ನೀರ್ಜಾ ಚಿತ್ರಕ್ಕೆ ನಿಷೇಧ ಹೇರಲಾಗಿದೆ.
ಬಾಲಿವುಡ್ ನಟಿ ಸೋನಂ ಕಪೂರ್ ನಟನೆಯ ನೀರ್ಜಾ ಸಿನಿಮಾದಲ್ಲಿ ಮುಸ್ಲಿಂರನ್ನು ಹಾಗೂ ಪಾಕಿಸ್ತಾನವನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಅಲ್ಲಿನ ವಾಣಿಜ್ಯ ಸಚಿವಾಲಯ ನಿಷೇಧ ಹೇರಿದೆ.
ಪಾಕಿಸ್ತಾನದ ಸೆನ್ಸಾರ್ ಮಂಡಳಿ ಗಮನಕ್ಕೆ ತಾರದೆ ವಾಣಿಜ್ಯ ಸಚಿವಾಲಯ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.