ಕಾಮಿಡಿ ನೈಟ್ಸ್ ವಿತ್ ಕಪಿಲ್ ತಂಡ (ಸಂಗ್ರಹ ಚಿತ್ರ) 
ಬಾಲಿವುಡ್

ಸುನಿಲ್ ಗ್ರೋವರ್, ಅಲಿ ಅಸ್ಗರ್ ಗೆ ಕಲರ್ಸ್ ನೋಟಿಸ್?

ಖ್ಯಾತ ಕಿರುತೆರೆ ಹಾಸ್ಯ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್ ನ ನಟರಾದ ಗುತ್ತಿ ಖ್ಯಾತಿಯ ಸುನಿಲ್ ಗ್ರೋವರ್, ಮತ್ತು ದಾದಿ ಖ್ಯಾತಿ ಅಲಿ ಅಸ್ಗರ್ ವಿರುದ್ಧ ಕಲರ್ಸ್ ವಾಹಿನಿ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ...

ಮುಂಬೈ: ಖ್ಯಾತ ಕಿರುತೆರೆ ಹಾಸ್ಯ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್  ನ ನಟರಾದ ಗುತ್ತಿ ಖ್ಯಾತಿಯ ಸುನಿಲ್ ಗ್ರೋವರ್, ಮತ್ತು ದಾದಿ ಖ್ಯಾತಿ ಅಲಿ ಅಸ್ಗರ್ ವಿರುದ್ಧ ಕಲರ್ಸ್ ವಾಹಿನಿ  ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಕಲರ್ಸ್ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಮಿಡಿ ನೈಟ್ಸ್ ವಿತ್ ಕಪಿಲ್ ನ ಪ್ರಮುಖ ಪಾತ್ರಗಳಾದ ಗುತ್ತಿ ಮತ್ತು ದಾದಿ ಪಾತ್ರಗಳನ್ನು ಈ ಇಬ್ಬರು ನಟರು ಖಾಸಗಿ  ಕಾರ್ಯಕ್ರಮದಲ್ಲಿ ಬಳಕೆ ಮಾಡಿಕೊಂಡಿದ್ದರು. ಇದರಿಂದ ಕಲರ್ಸ್ ಆಡಳಿತ ಮಂಡಳಿ ಸಿಟ್ಟಿಗೆದಿದ್ದು, ಈ ಇಬ್ಬರೂ ನಟರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.  ಕಾರಣಾಂತರಗಳಿಂದ ಹಾಸ್ಯನಟ ಮತ್ತು ನಿರೂಪಕ ಕಪಿಲ್ ಶರ್ಮಾ ನಡೆಸಿಕೊಡುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಿರುತೆರೆ ಕಾರ್ಯಕ್ರಮ ಸ್ಥಗಿತಗೊಂಡಿತ್ತು.

ಆದರೆ ಕಾರ್ಯಕ್ರಮದ ಕಾಪಿರೈಟ್ಸ್ ತಮ್ಮ ಬಳಿ ಇದ್ದು, ಕಾರ್ಯಕ್ರಮದ ಯಾವುದೇ ಪಾತ್ರಧಾರಿಗಳನ್ನು ನಟರು ವಾಹಿನಿ ಅನುಮತಿ ಇಲ್ಲದೆ ಅನುಕರಿಸುವಂತಿಲ್ಲ ಎಂದು ಕಲರ್ಸ್ ಆಡಳಿತ  ಮಂಡಳಿ ಪರೋಕ್ಷವಾಗಿ ಸ್ಪಷ್ಟಪಡಿಸಿದೆ.

ಮುಂಬರುವ ಫೆಬ್ರವರಿ 19ರಂದು ನಡೆಯಲಿರುವ ದ-ಬಂಗ್ ಹೆಸರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ನಟ ಸುನಿಲ್ ಗ್ರೋವರ್, ಅಲಿ ಅಸ್ಗರ್ ಅವರು ಕಾಮಿಡಿ ನೈಟ್ಸ್ ವಿತ್ ಕಪಿಲ್  ಕಾರ್ಯಕ್ರಮದಲ್ಲಿ ತಾವು ನಿರ್ವಹಿಸಿದ್ದ ಪಾತ್ರವನ್ನು ಈ ಕಾರ್ಯಕ್ರಮದಲ್ಲಿ ನಿರ್ವಹಿಸಲಿದ್ದು, ಇದಕ್ಕಾಗಿ ಇದೇ ವೇಷಭೂಷಣೆ ತೊಟ್ಟು ಅಭ್ಯಾಸ ನಡೆಸಿದ್ದರು. ಕಾರ್ಯಕ್ರಮದಲ್ಲಿ ನಟಿ ಜಾಕ್ವೆಲಿನ್  ಫರ್ನಾಂಡಿಸ್, ಸಲ್ಮಾನ್ ಖಾನ್ ಅವರು ಸೇರಿದಂತೆ ಬಾಲಿವುಡ್ ನ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT