ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 
ಬಾಲಿವುಡ್

'ರೋಬೋಟ್'ನಲ್ಲಿ ಖಳನಾಯಕರಾಗದಿರಲು ಸೂಚಿಸಿದ್ದು ರಜನಿ: ಬಿಗ್ ಬಿ

ತಮಿಳು ಬ್ಲಾಕ್ ಬಸ್ಟರ್ ಸಿನೆಮಾ 'ರೋಬೋಟ್ ' ನಲ್ಲಿ ನಟಿಸದಂತೆ ಸೂಚಿಸಿದವರು ತಮ್ಮ ಆಪ್ತ ಗೆಳೆಯ ಸೂಪರ್ ಸ್ಟಾರ್ ರಜನಿಕಾಂತ್ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್

ಮುಂಬೈ: ತಮಿಳು ಬ್ಲಾಕ್ ಬಸ್ಟರ್ ಸಿನೆಮಾ 'ರೋಬೋಟ್ ' ನಲ್ಲಿ ನಟಿಸದಂತೆ ಸೂಚಿಸಿದವರು ತಮ್ಮ ಆಪ್ತ ಗೆಳೆಯ ಸೂಪರ್ ಸ್ಟಾರ್ ರಜನಿಕಾಂತ್ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಎಸ್ ಶಂಕರ್ ನಿರ್ದೇಶನದ 'ರೋಬೋಟ್' ೨೦೧೦ರಲ್ಲಿ ಬಿಡುಗಡೆ ಕಂಡಿತ್ತು. ಇದರಲ್ಲಿ ರಜನಿಕಾಂತ್ ಮತ್ತು ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿದ್ದರು.

"ನಾನು ಖಳನಾಯಕನ ಪಾತ್ರ ವಹಿಸಬೇಕೆಂದು ಶಂಕರ್ ಕೇಳಿದ್ದರು. ನಾನು ರಜನಿ ಅವರಿಗೆ ಕರೆ ಮಾಡಿದ್ದಾಗ, ಅವರು ಹೇಳಿದ್ದೇನೆಂದರೆ ನಿಮ್ಮನ್ನು ಖಳನಾಯಕರಾಗಿ ಒಪ್ಪಲು ಜನರಿಗೆ ಕಷ್ಟ ಆದುದರಿಂದ ಮಾಡಬೇಡಿ ಎಂದರು. ನಾನು ಸರಿ ಎಂದೆ" ಎಂದು ಬಚ್ಚನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ರೋಬೋಟ್-೨ ಕ್ಕೆ ಕೂಡ ಅಮಿತಾಬ್ ಬಚ್ಚನ್ ಅವರಿಗೆ ಪಾತ್ರ ನೀಡಲಾಗಿದೆ ಎಂಬ ವದಂತಿಗಳನ್ನು ನಟ ತಳ್ಳಿ ಹಾಕಿದ್ದಾರೆ.

೭೩ ವರ್ಷದ ನಟ ಸದ್ಯಕ್ಕೆ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, 'ವಾಜಿರ್', 'ಟೀನ್', ಮತ್ತು 'ಆಂಖೆ-೨' ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!