ಹುಟ್ಟುಹಬ್ಬದ ಹುಡುಗಿ ನಟಿ ದೀಪಿಕಾ ಪಡುಕೋಣೆ 
ಬಾಲಿವುಡ್

ಬಾಲಿವುಡ್ ಮಸ್ತಾನಿಗೆ ೩೦; ಶುಭಾಶಯ ಕೋರಿದ ತಾರೆಯರು

ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಇಂದು ೩೦ನೆಯ ಹರೆಯಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಇತ್ತೀಚಿನ ಚಿತ್ರ ಸಂಜಯ್ ಲೀಲಾ ಭನ್ಸಾಲಿಯವರ 'ಬಾಜಿರಾವ್ ಮಸ್ತಾನಿ'ಯ

ಮುಂಬೈ: ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಇಂದು ೩೦ನೆಯ ಹರೆಯಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಇತ್ತೀಚಿನ ಚಿತ್ರ ಸಂಜಯ್ ಲೀಲಾ ಭನ್ಸಾಲಿಯವರ 'ಬಾಜಿರಾವ್ ಮಸ್ತಾನಿ'ಯ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿರುವ ನಟಿಗೆ ತಮ್ಮ ಸಹ ನಟ ನಟಿಯರೆಲ್ಲ ಶುಭಾಷಯ ಕೋರಿದ್ದಾರೆ.

ತಾರೆಯರಾದ ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಮಿಲ್ಕಾ ಸಿಂಗ್ ಇನ್ನೂ ಹಲವರು 'ಪಿಕು' ನಟಿಗೆ ಈ ವರ್ಷ ಸಂತಸ ತರಲೆಂದು ಶುಭಾಶಯ ಕೋರಿದ್ದಾರೆ.

ವಿಶ್ವದ ಮಾಜಿ ನಂ.೧ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಯವರ ಪುತ್ರಿ ದೀಪಿಕಾ ೨೦೦೬ ರಲ್ಲಿ ಕನ್ನಡ ಚಿತ್ರ 'ಐಶ್ವರ್ಯ'ದ ಮೂಲಕ ಸಿನೆಮಾಗೆ ಪಾದಾರ್ಪಣೆ ಮಾಡಿದ್ದರು. ನಂತರ 'ಓಂ ಶಾಂತಿ ಓಂ' ಮೂಲಕ ಬಾಲಿವುಡ್ ಗೆ ಜಿಗಿದು ತಮ್ಮ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದರು.

೨೦೧೨ ರ 'ಕಾಕ್ ಟೇಲ್', ನಂತರದ 'ಹೇ ಜವಾನಿ ಹೇ ದಿವಾನಿ', 'ಚೆನ್ನೈ ಎಕ್ಸ್ಪ್ರೆಸ್'', 'ಹ್ಯಾಪಿ ನ್ಯೂ ಯಿಯರ್', 'ರಾಮ್ ಲೀಲಾ' ಈ ನಟಿಗೆ ಹೆಸರು ತಂದುಕೊಟ್ಟ ಚಿತ್ರಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

SCROLL FOR NEXT