ಸನ್ನಿ ಲಿಯೋನ್ 
ಬಾಲಿವುಡ್

27 ಬಿಕಿನಿಯಲ್ಲಿ ಸನ್ನಿ ದರ್ಶನ!

ಸಿನಿಮಾದಲ್ಲಿ ನಟಿ ಬಿಕಿನಿಯಲ್ಲಿ ಕಾಣಿಸೋದು ಒಂದು ಸಲ. ಹೆಚ್ಚಂದ್ರೆ ಎರಡು ಸಲ. ಅದೂ ಸ್ವಿಮ್ಮಿಂಗ್‍ಪೂಲ್‍ನಲ್ಲೋ, ಬೀಚ್ ಸೀನ್‍ನಲ್ಲೋ, ಐಟಂ ಸಾಂಗ್‍ನಲ್ಲೋ ಇರಬಹುದು....

ಸಿನಿಮಾದಲ್ಲಿ ನಟಿ ಬಿಕಿನಿಯಲ್ಲಿ ಕಾಣಿಸೋದು ಒಂದು ಸಲ. ಹೆಚ್ಚಂದ್ರೆ ಎರಡು ಸಲ. ಅದೂ ಸ್ವಿಮ್ಮಿಂಗ್‍ಪೂಲ್‍ನಲ್ಲೋ, ಬೀಚ್ ಸೀನ್‍ನಲ್ಲೋ, ಐಟಂ ಸಾಂಗ್‍ನಲ್ಲೋ ಇರಬಹುದು. ಆದ್ರೆ, ಬಾಲಿವುಡ್ ತಾರೆ ಸನ್ನಿ ಲಿಯೋನ್ ಮುಂದಿನ 'ಮಸ್ತಿಝಾದೆ'ಯಲ್ಲಿ 27 ಸಲ ಬಿಕಿನಿ ಹಾಕಿ ಸುದ್ದಿ ಆಗಿದ್ದಾಳೆ! ಮಿಲಪ್ ಝವೇರಿ ನಿರ್ದೇಶನದ ಈ ಅಡಲ್ಟ್ ಕಾಮಿಡಿ ಸಿನಿಮಾ ಜ.29ರಂದು ತೆರೆ ಕಾಣುತ್ತಿದೆ. ಸನ್ನಿ ಲಿಯೋನ್ ಇದೇ ಮೊದಲ ಬಾರಿಗೆ ಡಬಲ್ ರೋಲ್‍ನಲ್ಲಿ ಕಾಣಿಸಿಕೊಳ್ತಿದ್ದಾಳೆ. ಕಾಮಿಡಿಯ ಲೆವೆಲ್ ಹೇಗಿದೆಯೋ ಗೊತ್ತಿಲ್ಲ, ಆದರೆ ಸನ್ನಿಯ ತರಹೇವಾರಿ  ಬಿಕಿನಿಗಳೇ ಸಿನಿಮಾದ ಹೈಲೈಟ್ಸ್. 'ಇಷ್ಟೊಂದ್ ಸಲ ಬಿಕಿನಿ ಹಾಕ್ಕೊಂಡು, ಅದರಲ್ಲೂ ಡಬಲ್ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಷ್ಟ ಆಗಿಲ್ವಾ?' ಎಂಬ ಪ್ರಶ್ನೆಗೆ ಸನ್ನಿಯ ಉತ್ತರವೂ ತುಂಬಾ ಹಾಟ್ ಆಗಿತ್ತು. 'ಹಾಗೇನೂ ಅನ್ನಿಸಲಿಲ್ಲ. ಆದ್ರೆ, ಜನ ನನ್ನ 24 ಗಂಟೆ ಬಿಕಿನಿಯಲ್ಲಿ ನೋಡಲು ಬಯಸುತ್ತಾರೆ. ಆದರೆ, ಜಗತ್ತು ನೋಡುವಂತೆ ನಾನು ಆ ಥರ ಇಲ್ಲ. ಜನ ಹಾಗೆ ನಿರೀಕ್ಷಿಸಿದಾಗಲೆಲ್ಲ ನನಗೆ ನಟಿಸಲು ಸಂಕಟವಾಗುತ್ತದೆ' ಎಂದಿದ್ದಾಳೆ ಸನ್ನಿ. 'ಮಾಜಿ ನೀಲಿತಾರೆ ಆದ್ಮೇಲೂ ಇನ್ನಾದರೂ ಅಡಲ್ಟ್ ಇಮೇಜಿನ ಸಿನಿಮಾಗಳಿಂದ ಹೊರಬರಬಹುದಿತ್ತಲ್ವಾ?' ಎಂಬ ಪ್ರಶ್ನೆಗೆ ಸನ್ನಿಯ ಉತ್ತರ ಹೀಗಿತ್ತು; 'ಸ್ಟೋರಿ ತುಂಬಾ ಇಂಟೆರೆಸ್ಟಿಂಗ್ ಅಂತ ಅನ್ನಿಸ್ತು. ಸ್ಕ್ರಿಪ್ಟ್ ಓದಿ ನಕ್ಕು ಖುಷಿ ಆದ್ಮೇಲೇ ಮಸ್ತಿಝಾದೆಗೆ ಒಪ್ಪಿಕೊಂಡೆ' ಎನ್ನುತ್ತಾಳೆ ಸನ್ನಿ. ಮಾದಕ ನಟಿಯ ಈ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಎಲ್ಲೆಲ್ಲಿ ಕತ್ತರಿ ಹಾಕುತ್ತೋ ಅನ್ನೋ ಭಯ ಕೂಡ ಸನ್ನಿಗೆ ಇದೆಯಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ಯಾನರ್‌ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ, ಫೈರಿಂಗ್; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್‌; ಈ ಬಾರಿಯೂ ನಾನೇ ಬಜೆಟ್ ಮಂಡಿಸುತ್ತೇನೆ, ಸಿದ್ಧತೆ ಆರಂಭ: CM ಸಿದ್ದರಾಮಯ್ಯ

ರಾಹುಲ್ ಗಾಂಧಿ ಪ್ರಭು ಶ್ರೀರಾಮನಿದ್ದಂತೆ: ಶೋಷಿತರಿಗೆ ನ್ಯಾಯ ಒದಗಿಸುತ್ತಿದ್ದಾರೆ - ನಾನಾ ಪಟೋಲೆ

ಕೋಗಿಲು ತೆರವು: ಕೇವಲ 90 ಜನರಿಗೆ ಮಾತ್ರ ಮನೆ ಹಂಚಿಕೆ - ಸಚಿವ ಭೈರತಿ ಸುರೇಶ್

ಬಾಂಗ್ಲಾದೇಶದಲ್ಲಿ ಜೈಶಂಕರ್ ಹ್ಯಾಂಡ್ ಶೇಕ್: ಪಾಕ್ ವರದಿಗಳು ದೊಡ್ಡ "ಜೋಕ್" ಎಂದ ಮಾಜಿ ರಾಯಭಾರಿ!

SCROLL FOR NEXT