ನವದೆಹಲಿ: ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿದ್ದ ಬಾಲಿವುಡ್ ನ ಆರು ಕಲಾವಿದರಿಗೆ ದೆಹಲಿ ಸರ್ಕಾರ ನೊಟೀಸ್ ನೀಡಿದೆ.
ಪಾನ್ ಮಸಾಲಾ ತಿನ್ನುವುದನ್ನು ನಿಷೇಧಿಸಲು ಮುಂದಾಗಿರುವ ದೆಹಲಿ ಎಎಪಿ ಸರ್ಕಾರದ ಆರೋಗ್ಯ ಇಲಾಖೆ, ಬಾಲಿವುಡ್ ನಟರಾದ ಅಜಯ್ ದೇವಗನ್, ಶಾರುಕ್ ಖಾನ್, ಸೈಫ್ ಅಲಿ ಖಾನ್, ಅರ್ಬಾಜ್ ಖಾನ್, ಗೋವಿಂದ ಹಾಗೂ ನಟಿ ಸನ್ನಿ ಲಿಯೋನ್ ಗೆ ಪತ್ರ ಬರೆದಿದೆ. ಇನ್ನು ಮುಂದೆ ಯಾವುದೇ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸದಂತೆ ಮನವಿ ಮಾಡಿದೆ.
ಪಾನ್ ಮಸಾಲಾ ಕಂಪನಿಗಳ ಜೊತೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ಹಿಂಪಡೆಯಬೇಕೆಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ಇನ್ಮುಂದೆ ಈ ರೀತಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಾರದೆಂದು ಹೇಳಿದೆ