ಬಾಲಿವುಡ್

ಬಾಲಿವುಡ್ ನಲ್ಲಿ ಒಳ್ಳೆಯ ಬರವಣಿಗೆ ಇಲ್ಲ: ರಾಹುಲ್ ಬೋಸ್

Guruprasad Narayana
ಮುಂಬೈ: ಬಾಲಿವುಡ್ ಸಿನೆಮಾಗಳಲ್ಲಿ ಒಳ್ಳೆಯ ಬರವಣಿಗೆಯ ಕೊರತೆಯಿದೆ ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ-ನಿರ್ದೇಶಕ ರಾಹುಲ್ ಬೋಸ್. 
ಬಾಲಿವುಡ್ ನಲ್ಲಿ ಬರವಣಿಗೆ (ಸ್ಕ್ರಿಪ್ಟ್-ಕತೆ) ಉತ್ತಮಗೊಂಡಿದೆಯೇ ಎಂಬ ಪ್ರಶ್ನೆಗೆ "ಇಲ್ಲ, ಅವರು ಈಗ ಹೊಸ ಬರವಣಿಗೆ ಹುಟ್ಟುತ್ತಿರುವ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅದು ಚೆನ್ನಾಗಿರಬೇಕು. ಇಂದಿನ ದಿನಗಳಲ್ಲಂತೂ ಅದು ಉತ್ತಮವಾಗಿರಬೇಕು. ಅರ್ಧಂಬರ್ಧ ಇರುವದಲ್ಲ".
"ಅರ್ಧ ಬಹಳ ಉತ್ತಮವಾಗಿ ಬರೆದು ಇನ್ನರ್ಧ ಅತಿ ಕೆಟ್ಟದಾಗಿ ಬರೆದ ಹಲವಾರು ಸಿನೆಮಾಗಳಿವೆ. ಅವುಗಳ ಹೆಸರು ಬೇಡ. ಆದರೆ ಸಂಪೂರ್ಣವಾಗಿ ಉತ್ತಮವಾಗಿ ಬರೆಯುವುದು ಅವಶ್ಯಕ. ಬಾಲಿವುಡ್ ನಲ್ಲಿ ಒಳ್ಳೆಯ ಬರವಣಿಗೆ ಬರುತ್ತಿಲ್ಲ. ಪುಸ್ತಕಗಳಿಂದ ಅಳವಡಿಸಿಕೊಂಡ ಕೆಲವು ಒಳ್ಳೆಯವು ಇವೆ" ಎಂದು ರಾಹುಲ್ ಹೇಳಿದ್ದಾರೆ. 
ಇತ್ತೀಚೆಗೆ 'ಪೂರ್ಣ' ಸಿನೆಮಾ ನಿರ್ದೇಶಿಸಿದ ರಾಹುಲ್ ಯಾರ ಜೊತೆಗೂ ಕೆಲಸ ಮಾಡಲು ಸಿದ್ಧ ಆದರೆ ಅವರಿಗೆ ಬದ್ಧತೆ ಇರಬೇಕು ಎಂದಿದ್ದಾರೆ. 
"ಯಾವುದೇ ರೀತಿಯ ಬಜೆಟ್ ಇರಲಿ, ಯಾರೇ ಆಗಿರಲಿ, ಯಾವಾಗಲಾದರೂ ಇರಲಿ ನಾನು ಕೆಲಸ ಮಾಡಲು ಸಿದ್ಧ, ಆದರೆ ಸಿನೆಮಾದಲ್ಲಿ ಆಳವಾದ ಭಾವನೆಗಳು ಇರಬೇಕು ಮತ್ತು ನೋಡಿದ ಪ್ರೇಕ್ಷಕರು ತಮ್ಮ ಜೀವನ ಮತ್ತು ತಮ್ಮ ಬಗೆಗಿಂತ ಒಳ್ಳೆಯ ಭಾವನೆಯಿಂದ ಹೊರಬರಬೇಕು. ನಾನು ಯಾರ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂಬುದು ಮುಖ್ಯವಲ್ಲ ಬದಲಾಗಿ ಅವರ ಬದ್ಧತೆ ಏನು ಎಂಬುದಷ್ಟೇ" ಎಂದಿದ್ದಾರೆ. 
ತೆಲಂಗಾಣದ ಬಡ ಹುಡುಗಿ ಮೇ 25 2014 ರಂದು ಮೌಂಟ್ ಎವೆರೆಸ್ಟ್ ಚಾರಣ ಮಾಡಿದ ಅತಿ ಸಣ್ಣ ವಯಸ್ಸಿನ ಯುವತಿ ಎಂಬ ಸ್ಫುರ್ತಿದಾಯಕ ನಿಜ ಘಟನೆ ಆಧಾರಿತ 'ಪೂರ್ಣ' ಸಿನೆಮಾವನ್ನು ರಾಹುಲ್ ನಿರ್ದೇಶಿಸಿದ್ದಾರೆ. 
SCROLL FOR NEXT