ರಾಖಿ ಸಾವಂತ್ ಮತ್ತು ಗಾಯಕ ಮಿಕಾ ಸಿಂಗ್ (ಸಂಗ್ರಹ ಚಿತ್ರ) 
ಬಾಲಿವುಡ್

ಮಹಿಳೆಗೆ ಕಿರುಕುಳ ಪ್ರಕರಣ; ಗಾಯಕ ಮಿಕಾ ಸಿಂಗ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್!

ಇತ್ತೀಚೆಗಷ್ಟೇ ಮಾಡೆಲ್ ಒಬ್ಬರಿಗೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಬಾಲಿವುಡ್ ನ ಖ್ಯಾತ ಗಾಯಕ ಮಿಕಾ ಸಿಂಗ್ ಗೆ ನಟಿ ರಾಖಿ ಸಾವಂತ್ ಬೆಂಬಲ ನೀಡಿದ್ದಾರೆ.

ಮುಂಬೈ: ಇತ್ತೀಚೆಗಷ್ಟೇ ಮಾಡೆಲ್ ಒಬ್ಬರಿಗೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಬಾಲಿವುಡ್ ನ ಖ್ಯಾತ ಗಾಯಕ ಮಿಕಾ ಸಿಂಗ್ ಗೆ ನಟಿ ರಾಖಿ ಸಾವಂತ್ ಬೆಂಬಲ  ನೀಡಿದ್ದಾರೆ.

ಕಿರುಕುಳ ಪ್ರಕರಣದಲ್ಲಿ ಮಿಕಾ ಸಿಂಗ್ ಅವರ ಯಾವುದೇ ತಪ್ಪಿಲ್ಲ. ವಿನಾಕಾರಣ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಿಜ ಹೇಳಬೇಕು ಎಂದು ಎಂದರೆ ಆ ಮಾಡೆಲ್ ನಿಂದಲೇ ನಿತ್ಯ ಮಿಕಾ  ಸಿಂಗ್ ಅಶ್ಲೀಲ ಮೆಸೇಜ್ ಗಳು ಬರುತ್ತಿದ್ದವು ಎಂದು ರಾಖಿ ಆರೋಪಿಸಿದ್ದಾರೆ. ಮುಂಬೈನಲ್ಲಿ ಮಾತನಾಡಿದ ರಾಖಿ ಸಾವಂತ್, "ನಾನು ಮಿಕಾ ಸಿಂಗ್ ರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ  ಮಾಹಿತಿ ಪಡೆದಿದ್ದೇನೆ. ಅಲ್ಲದೆ ನನಗೆ ತಿಳಿದಂತೆ ಮಿಕಾ ಸಿಂಗ್ ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ. ನನ್ನ ಮತ್ತು ಮಿಕಾ ಸಿಂಗ್ ಪರಿಚಯವಾದ ಬಳಿಕ ಇದೇ  ಮೊದಲ ಬಾರಿಗೆ ನಾನು ಅವರ ಕಣ್ಣಂಚ್ಚಲ್ಲಿ ನೀರು ನೋಡಿದ್ದೇನೆ. ಅವರ ಮುಖಭಾವದಿಂದ ತಿಳಿಯುತ್ತದೆ ಅವರು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

"ಚಿತ್ರರಂಗದಲ್ಲಿ ನಾವು ತುಂಬಾ ಕಷ್ಟಪಟ್ಟು ಮೇಲಕ್ಕೆ ಬರುತ್ತೇವೆ. ಆದರೆ ಯಾರೋ ಕೆಲವರು ಇಂಥಹ ಸುಳ್ಳಿನ ಆರೋಪಗಳನ್ನು ಮಾಡುವ ಮೂಲಕ ನಮ್ಮ ಕಷ್ಟವನ್ನು ಹಾಳುಮಾಡಲು  ಯತ್ನಿಸುತ್ತಾರೆ. ಸುಖಾ ಸುಮನ್ಮೆ ವಿವಾದ ಸೃಷ್ಟಿಸಿ ಅವರ ಜೀವನವನ್ನೇ ಹಾಳು ಮಾಡಲು ಯತ್ನಿಸುತ್ತಾರೆ. ಮಿಕಾ ಸಿಂಗ್ ಅವರ ವಿಚಾರದಲ್ಲೂ ಆಗಿರುವುದು ಇದೇ. ನಿಜ ಹೇಳಬೇಕು ಎಂದರೆ  ಮಾಡೆಲ್ ಯುವತಿಯೇ ಮಿಕಾ ಸಿಂಗ್ ಅವರಿಗೆ ಕಿರುಕುಳ ನೀಡಿದ್ದು, ನಿತ್ಯ ಅವರ ಮೊಬೈಲ್ ಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಳು. ಈ ಬಗ್ಗೆ ನನ್ನ ಬಳಿ ಪುರಾವೆಗಳಿದ್ದು, ನಾನು ಸಾಕಷ್ಟು ಬಾರಿ  ಆ ನಂಬರ್ ಅನ್ನು ಬ್ಲಾಕ್ ಮಾಡುವಂತೆ ಅವರ ಬಳಿ ಹೇಳಿದ್ದೆ, ಅದರೆ ಎಷ್ಟು ಮಂದಿಯ ನಂಬರ್ ಗಳನ್ನು ಬ್ಲಾಕ್ ಮಾಡಲು ಸಾಧ್ಯ. ಇದನ್ನೇ ಅಸ್ತರವಾಗಿಸಿಕೊಂಡ ಆ ಹುಡುಗಿ ಮಿಕಾ ಸಿಂಗ್  ಅವರ ಮನೆಗೂ ಹೋಗಿದ್ದಳಂತೆ. ಈ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಆ ಹುಡುಗಿ ಮಿಕಾ ಸಿಂಗ್ ಅವರಿಗೆ ಪರಿಚಿತಳಾಗಿದ್ದಾಳೆ. ಬಳಿಕ ಆ ಹುಡುಗಿ ಮಿಕಾಸಿಂಗ್ ಬೆದರಿಕೆ ಹಾಕಲು ಆರಂಭಿಸಿದ್ದು,  ಮಿಕಾ ಸಿಂಗ್ ಹಣ ಪಡೆಯಲು ಮುಂದಾಗಿದ್ದಾಳೆ. ಇದಕ್ಕೆ ಮಿಕಾ ಸಿಂಗ್ ಅವರು ಸೊಪ್ಪು ಹಾಕದಿದ್ದಾಗ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾಳೆ ಎಂದು ರಾಖಿ ಸಾವಂತ್  ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT