ನವದೆಹಲಿ: ಕಳೆದವಾರವಷ್ಟೇ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರ, ಹಲವು ದಾಖಲೆಗಳನ್ನು ಸರಿಗಟ್ಟಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರಕ್ಕೆ ಎಲ್ಲಾ ವಯೋಮಾನದ ಪ್ರೇಕ್ಷಕರು ಮಾರು ಹೋಗಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ರೂ ಗಳಿಸಿದ್ದ ಸುಲ್ತಾನ್ ವಾರ ಕಳೆಯುವುದರ ಒಳಗೆ 142 ಕೋಟಿ ರೂ ಬಾಚಿಕೊಂಡಿದೆ. ಅಷ್ಟೇ ಅಲ್ಲ, ಈ ಮೂಲಕ ಸಲ್ಮಾನ್ ಅಭಿನಯದ ಹತ್ತನೇ ಫಿಲ್ಮ್ ನೂರು ಕೋಟಿ ರೂ. ಕ್ಲಬ್ ಸೇರಿದ ಸಾಧನೆ ಮಾಡಿದೆ. ಜುಲೈ 6 ರಂದು ಸುಲ್ತಾನ್ ದೇಶಾದ್ಯಂತ ಬಿಡುಗಡೆಯಾಗಿತ್ತು.