ಇಸ್ಲಾಮಾಬಾದ್: ಫೇಸ್ಬುಕ್`ನಲ್ಲಿ ಅಶ್ಲೀಲ ವಿಡಿಯೋ ಹಾಕಿದಳೆಂಬ ಕಾರಣಕ್ಕೆ ಪಾಕಿಸ್ತಾನದ ವಿವಾದಿತ ಮಾಡೆಲ್ ಖಂದಿಲ್ ಬಲೋಚ್ ಳನ್ನು ಕೊಂದ ಆಕೆಯ ಸೋಹದರನನ್ನು ಗುಂಡಿಕ್ಕಿ ಸಾಯಿಸಬೇಕು ಎಂದು ಖಂದಿಲ್ ತಂದೆ ಹೇಳಿದ್ದಾರೆ.
'ಅವನಿಗೆ ಕಂಡಲ್ಲಿ ಗುಂಡಿಕ್ಕಿ ಸಾಯಿಸಬೇಕು. ಅವನು ನನ್ನ ಸಣ್ಣ ಮಗಳ ಉಸಿರು ನಿಲ್ಲಿಸಿದ' ಎಂದು ಬಲೋಚ್ ತಂದೆ ಅನ್ವರ್ ಅಜೀಮ್ ಅವರು ಹೇಳಿದ್ದಾರೆ.
ನ್ಯೂಸ್ ಇಂಟರ್ ನ್ಯಾಷಿನಲ್ ವರದಿ ಪ್ರಕಾರ, ತಮ್ಮ ಕಿರಿಯ ಪುತ್ರನೇ ತಮ್ಮ ಮಗಳ ಮರ್ಯಾದಾ ಹತ್ಯೆ ಮಾಡಿದ ಬಗ್ಗೆ ತಮ್ಮ ನೋವು ಹೇಳಿಕೊಂಡಿದ್ದಾರೆ. ನಾವು ಮಾತ್ರೆ ಸೇವಿಸಿ ಮೇಲಿನ ಮಹಡಿಯಲ್ಲಿ ಮಲಗಿದ್ದೇವೆ. ಇಲ್ಲದಿದ್ದರೆ ಅವಳು ನಮ್ಮನ್ನು ಕೂಗುತ್ತಿದ್ದಳು ಎಂದು ಅಜೀಮ್ ತಿಳಿಸಿದ್ದಾರೆ.
ಖಂದಿಲ್ ಬಲೋಚ್ ತನ್ನ ಉತ್ತಮ ಸ್ನೇಹಿತೆಯಾಗಿದ್ದಳು ಎಂದಿರುವ ಅಜೀಮ್, ಮಗ ವಾಸೀಮ್ ಒಬ್ಬ ವಿಚಿತ್ರ ವ್ಯಕ್ತಿ ಎಂದು ಹೇಳಿದ್ದಾರೆ.
ಇನ್ನು ಬಲೋಚ್ ತಾಯಿ ಸಹ ಇದನ್ನೇ ಹೇಳಿದ್ದು, ಅವಳು ನನ್ನ ಬಳಿ ಎಲ್ಲಾ ರಹಸ್ಯ ವಿಚಾರಗಳನ್ನು ಸಹ ಚರ್ಚಿಸುತ್ತಿದ್ದಳು ಎಂದಿದ್ದಾರೆ. ಅಲ್ಲದೆ ನಾವು ತಾಯಿ, ಮಗಳು ಇಬ್ಬರೂ ಕಷ್ಟ, ಸುಖ ಸೇರಿದಂತೆ ಎಲ್ಲಾ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.
ನಾನು ಮತ್ತು ನನ್ನ ಪತಿ ಇಬ್ಬರೂ ತುಂಬಾ ಅಳವಾದ ನಿದ್ದೆಗೆ ಜಾರಿದ್ದೇವು. ಮಲಗುವ ಮುನ್ನ ಇಬ್ಬರು ಹಾಲು ಕುಡಿದಿದ್ದೇವೆ. ಆ ಹಾಲಿನಲ್ಲಿ ನಿದ್ದೆ ಮಾತ್ರೆ ಸೇರಿಸಿರುವ ಸಾಧ್ಯತೆ ಇದೆ ಎಂದು ಖಂದಿಲ್ ತಾಯಿ ತಿಳಿಸಿದ್ದಾರೆ.