ಸಲ್ಮಾನ್ ಖಾನ್ 
ಬಾಲಿವುಡ್

ದೀಪಿಕಾ, ಪ್ರಿಯಾಂಕ ಹಾಲಿವುಡ್ ರಿಟರ್ನ್ಡ್: ಕಾಲೆಳೆದ ಸಲ್ಮಾನ್ ಖಾನ್

: ಅತ್ಯಾಚಾರ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ನಟ ಸಲ್ಮಾನ್ ಖಾನ್ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಛೋಪ್ರಾ ಅವರ ..

ನವದೆಹಲಿ: ಅತ್ಯಾಚಾರ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ  ನಟ ಸಲ್ಮಾನ್ ಖಾನ್  ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಛೋಪ್ರಾ ಅವರ ಕಾಲೆಳೆದಿದ್ದಾರೆ.

ಐಫಾ 2016ರ ಸಮಾರಂಭದಲ್ಲಿ ಬಾಲಿವುಡ್​ನ ನಟಿಯಾರಾದ ಪ್ರಿಯಾಂಕಾ ಹಾಗೂ ದೀಪಿಕಾ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸುವ ಮೂಲಕ ಸ್ಟಾರ್ ನಟಿಯರ ಕುರಿತು ತಮಾಷೆ ಮಾಡಿದ್ದಾರೆ.

ಮ್ಯಾಡ್ರಿಡ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರೋತ್ಸವ ಸಮಾರಂಭದಲ್ಲಿ ಸಲ್ಮಾನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಕೇಶ್ ಓಂ ಪ್ರಕಾಶ್ ಮೇಹರಾ ಅವರ ಮಿರ್ಜ್ಯಾ ಚಿತ್ರದ ಟ್ರೇಲರ್ ಲಾಂಚ್ ಮಾಡಲಾಯಿತು. ನಂತರ ಮಾತನಾಡಿದ ಸಲ್ಮಾನ್, ಇಬ್ಬರು ಬಾಲಿವುಡ್ ನಟಿಯರು ಹಾಲಿವುಡ್ ‘ಹಾಲಿವುಡ್ ರಿಟರ್ನ್ಡ್. ಹಾಲಿವುಡ್​ನಿಂದ ಬಾಲಿವುಡ್​ಗೆ ಬಾಲಿವುಡ್​ನಿಂದ ಹಾಲಿವುಡ್​ಗೆ ಜಿಗಿಯುತ್ತಿದ್ದಾರೆ. ಹಾಲಿವುಡ್ ಗೆ ಹೋಗಿರುವ ಇಬ್ಬರು ಬಾಲಿವುಡ್ ಅನ್ನು ಮರೆತಿದ್ದಾರೆ ಎಂದು ಛೇಡಿಸಿದರು.

ನನ್ನ ಪ್ರತಿ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದ್ದರಿಂದ ಮೌನಕ್ಕೆ ಶರಣಾಗುತ್ತೇನೆ ಎಂದು ಸಲ್ಮಾನ್ ಖಾನ್ ಹೇಳಿದರು. ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್, ಕರಿನಾ ಕಪೂರ್, ಫರ್ಹಾನ್ ಅಖ್ತರ್, ದೀಪಿಕಾ ಪಡುಕೋಣೆ, ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT