ಮುಂಬೈ: ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸುಲ್ತಾನ್ ಇದೇ ಜುಲೈ 6ರಂದು ತೆರೆಕಾಣಲಿದೆ ಎಂದು ತಿಳಿದುಬಂದಿದೆ.
ಪ್ರತೀ ವರ್ಷ ಈದ್ ಹಬ್ಬದಂದು ಸಲ್ಮಾನ್ ಖಾನ್ ಅವರ ಚಿತ್ರಗಳು ತೆರೆಕಾಣುತ್ತಿದ್ದು, ಈ ಬಾರಿಯೂ ಸುಲ್ತಾನ್ ಚಿತ್ರ ಈದ್ ಹಬ್ಬದ ವಾರದಂದೇ ತೆರೆಕಾಣಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಸುಲ್ತಾನ್ ಚಿತ್ರದಲ್ಲಿ ನಟಿ ಅನುಷ್ಕಾ ಶರ್ಮಾ ಮತ್ತು ನಟ ಸಲ್ಮಾನ್ ಖಾನ್ ಜೋಡಿ ಕುಸ್ತಿಪಟುಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಅಲಿ ಅಬ್ಬಾಸ್ ಝಫರ್ ಅವರು ನಿರ್ದೇಶಿಸಿದ್ದಾರೆ. ವಿಶಾಲ್ ಶೇಖರ್ ಎಂಬ ಸಂಗೀತ ನಿರ್ದೇಶಕ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.