ಸೂಪರ್ ಸ್ಟಾರ್ ಹೃತಿಕ್ ರೋಶನ್ 
ಬಾಲಿವುಡ್

'ಧೂಮ್-೪'ರಲ್ಲಿ ಹೃತಿಕ್ ಗೆ ಪಾತ್ರವಿಲ್ಲ

'ಧೂಮ್' ಆಕ್ಷನ್ ಸರಣಿಯಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನೆಮಾದಲ್ಲಿ, ನಟ ಪ್ರಭಾಸ್ ಅ ಜೊತೆಗೆ ನಟಿಸಲಿದ್ದಾರೆ ಎಂಬ ವದಂತಿಯನ್ನು ಸೂಪರ್ ಸ್ಟಾರ್ ಹೃತಿಕ್ ರೋಶನ್

'ಧೂಮ್' ಆಕ್ಷನ್ ಸರಣಿಯಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನೆಮಾದಲ್ಲಿ, ನಟ ಪ್ರಭಾಸ್ ಅ ಜೊತೆಗೆ ನಟಿಸಲಿದ್ದಾರೆ ಎಂಬ ವದಂತಿಯನ್ನು ಸೂಪರ್ ಸ್ಟಾರ್ ಹೃತಿಕ್ ರೋಶನ್ ತಳ್ಳಿಹಾಕಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ 'ಧೂಮ್-೪'ರಲ್ಲಿ ಬಾಹುಬಲಿ ನಾಯಕ ನಟ ಪ್ರಭಾಸ್ ಮತ್ತು 42 ವರ್ಷ ಹೃತಿಕ ಮುಖ್ಯ ಖಳನಾಯಕರಾಗಲಿದ್ದಾರೆ ಎಂಬ ವದಂತಿ ಹರಡಿತ್ತು.

"ನಾನು ಸದ್ಯಕ್ಕೆ ೨ ಚಿತ್ರಗಳಲ್ಲಷ್ಟೇ ನಟಿಸುತ್ತಿರುವುದು. 'ಕಾಬಿಲ್' ಮತ್ತು 'ವಿಕ್ಟರ್'! ಅಷ್ಟೇ" ಎಂದು ತಮ್ಮ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುವಾಗ ತಿಳಿಸಿದ್ದಾರೆ.

ಸಂಜಯ್ ಗುಪ್ತಾ ನಿರ್ದೇಶನದ 'ಕಾಬಿಲ್' ಸಿನೆಮಾದಲ್ಲಿ ಹೃತಿಕ್ ಎದುರು ಯಾಮಿನಿ ಗೌತಮ್ ನಟಿಸುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಇದು ಮುಂದಿನ ವರ್ಷ ಜನವರಿ ೨೬ಕ್ಕೆ ಬಿಡುಗಡೆಯಾಗಲಿದೆ.

ಯಶ್ ರಾಜ್ ಫಿಲ್ಮ್ಸ್ ನಡಿ, ಹೃತಿಕ್ ಮತ್ತೊಂದು ಸಿನೆಮಾ ಒಪ್ಪಿಕೊಂಡಿದ್ದಾರೆ. 'ಧೂಮ್' ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ವಿಜಯ್ ಕೃಷ್ಣ ಆಚಾರ್ಯ ಈ ಸಿನೆಮಾದ ನಿರ್ದೇಶಕ.

ಈ ವರ್ಷ 'ಬ್ಯಾಂಗ್ ಬ್ಯಾಂಗ್' ನಟ ಅಶುತೋಶ್ ಗೌರೀಕರ್ ಅವರ ಐತಿಹಾಸಿಕ ಸಿನೆಮಾ 'ಮೊಹೆಂಜೋ ದಾರೋ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನ: ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ- ಬಿಜೆಪಿ

SCROLL FOR NEXT