'ಎಂ ಎಸ್ ಧೋನಿ- ದ ಅನ್ ಟೋಲ್ಡ್ ಸ್ಟೋರಿ' ಸಿನೆಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ 
ಬಾಲಿವುಡ್

ಎಂ ಎಸ್ ಧೋನಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು: ಸುಶಾಂತ್ ಸಿಂಗ್ ರಜಪೂತ್

ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಮೇಲೆ ರೂಪುಗೊಳ್ಳುತ್ತಿರುವ ಬಯೋಪಿಕ್ ನಲ್ಲಿ ಧೋನಿ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್

ಮುಂಬೈ: ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಮೇಲೆ ರೂಪುಗೊಳ್ಳುತ್ತಿರುವ ಬಯೋಪಿಕ್ ನಲ್ಲಿ ಧೋನಿ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, "ಧೋನಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ಅದ್ಭುತ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.

'ಎಂ ಎಸ್ ಧೋನಿ- ದ ಅನ್ ಟೋಲ್ಡ್ ಸ್ಟೋರಿ' ಸಿನೆಮಾದಲ್ಲಿ ಸುಶಾಂತ್ ನಾಯಕ ನಟ. ವಿಶ್ವ ಟ್ವೆಂಟಿ೨೦ ಸರಣಿಯಲ್ಲಿ ಬಾಂಗ್ಲಾ ವಿರುದ್ಧ ಭಾರತ ಜಯಗಳಿಸಿದ ಮೇಲೆ ಟ್ವೀಟ್ ಮಾಡಿದ ಸುಶಾಂತ್ ಈ ಕ್ರಿಕೆಟ್ ದಂತಕಥೆಯ (ಧೋನಿ) ಮೇಲೆ ಇನ್ನೂ ೧೦೦ ಸಿನೆಮಾಗಳನ್ನು ಮಾಡಿದರೂ ಸಾಕಾಗುವುದಿಲ್ಲ ಎಂದಿದ್ದಾರೆ.

"ನಾವು ನಿಮ್ಮ ಬಗ್ಗೆ ೧೦೦ ಸಿನೆಮಾಗಳನ್ನು ಮಾಡಬಹುದು ಮತ್ತು ಅಷ್ಟು ಸಾಕಾಗುವುದಿಲ್ಲ. ನೀವು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ಅದ್ಭುತ ವ್ಯಕ್ತಿ. ಎಂಎಸ್ ನಾವು ನಿಮ್ಮನ್ನು ಪ್ರೀತಿಸುತ್ತೇವೆ" ಎಂದು ಸುಶಾಂತ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಈ ಬಯೋಪಿಕ್ ಅನ್ನು ನೀರಜ್ ಪಾಂಡೆ ನಿರ್ದೇಶಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಟಿಸಲು ಭಾರತೀಯ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಅವರಿಂದ ತರಬೇತು ಪಡೆಯುತ್ತಿದ್ದು, ಧೋನಿ ಅವರ ವಿಶಿಷ್ಟ ಕ್ರಿಕೆಟ್ 'ಹೆಲಿಕ್ಯಾಪಟರ್ ಶಾಟ್' ಕಲಿಯುವ ವೇಳೆ ತಮ್ಮ ಪಕ್ಕೆಲಬಿಗೆ ಗಾಯ ಮಾಡಿಕೊಂಡಿದ್ದಾರೆ.

ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಸಿನೆಮಾ ಸೆಪ್ಟಂಬರ್ ೨ರಂದು ಬಿಡುಗಡೆಯಾಗಲಿದ್ದು, ಕಿಯರ ಅದ್ವಾನಿ, ಅನುಪಮ್ ಖೇರ್ ಮತ್ತು ಹೇರ್ರಿ ತಂಗ್ರಿ ಕೂಡ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT