ದೀಪಿಕಾ ಪಡುಕೋಣೆ ಡಿ ಗ್ಲಾಮ್ ಅವತಾರದಲ್ಲಿ 
ಬಾಲಿವುಡ್

ಡಿ-ಗ್ಲಾಮ್ ಲುಕ್ ನಲ್ಲಿ ದೀಪಿಕಾ ಪಡುಕೋಣೆ: ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ ನಟಿಯ ಹೊಸ ಅವತಾರದ ಫೋಟೋಗಳು

ಸಂಪೂರ್ಣ ಡಿ-ಗ್ಲಾಮ್ ಅವತಾರದಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇರಾನಿ ಮೂಲದ ನಿರ್ದೇಶಕ ಮಾಜಿದ್...

ಮುಂಬೈ: ಸಂಪೂರ್ಣ ಡಿ-ಗ್ಲಾಮ್ ಅವತಾರದಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇರಾನಿ ಮೂಲದ ನಿರ್ದೇಶಕ ಮಜಿದ್ ಮಜಿದಿ ಅವರ ಜೊತೆಗಿರುವ ಚಿತ್ರ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು ಚಿತ್ರದ ಕುರಿತು ಹೆಚ್ಚಿನ ಗುರುತುಗಳನ್ನು ಸದ್ಯದಲ್ಲಿಯೇ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಸಲ್ವಾರ್ ಕುರ್ತಾ ಧರಿಸಿ ಒಂಚೂರು ಮೇಕಪ್ ಇಲ್ಲದೆ ನಟಿಸಿರುವ ದೃಶ್ಯದಲ್ಲಿ ಅದು ದೀಪಿಕಾ ಪಡುಕೋಣೆ ಹೌದೇ ಅಲ್ಲವೇ ಎಂದು ಒಮ್ಮೆ ಸಂಶಯ ಬಾರದೆ ಇರದು. ಮಾಜಿದಿ ಅವರ ಮುಂದಿನ ಚಿತ್ರದಲ್ಲಿ ದೀಪಿಕಾ ನಟಿಸುತ್ತಾರೆ ಎಂಬ ವದಂತಿಗಳು ಹಬ್ಬಿವೆ.
ತಮ್ಮ ಚಿತ್ರದ ಮುಖ್ಯ ಪಾತ್ರಕ್ಕೆ ದೀಪಿಕಾ ಅವರ ಡಿ-ಗ್ಲಾಮರ್ ಲುಕ್ ಹೊಂದಿಕೆಯಾಗುತ್ತದೆಯೇ ಎಂದು ನೋಡಲು ದಿನವಿಡೀ ಮಜಿದಿಯವರು ಶೂಟ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ದೀಪಿಕಾ ಅವರನ್ನು ಮಾಧ್ಯಮದವರು ಕೇಳಿದಾಗ, ನಿಮಗೆ ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದಷ್ಟೇ ಹೇಳಿದ್ದಾರೆ.
ಕಳೆದ ರಾತ್ರಿ ನಡೆದ ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ ಕಾರ್ಯಕ್ರಮದ ವೇಳೆ ಸುದ್ದಿಗಾರರಿಗೆ ಮಾತನಾಡಲು ದೀಪಿಕಾ ಸಿಕ್ಕಿದ್ದರು. ಇತ್ತೀಚೆಗೆ ಲಕ್ಸ್ ಜಾಹಿರಾತುವೊಂದರಲ್ಲಿ ಶಾರೂಕ್ ಖಾನ್, ಶ್ರೀದೇವಿ, ಮಾಧುರಿ ದೀಕ್ಷಿತ್ ಜೊತೆ ಕಾಣಿಸಿಕೊಂಡಿದ್ದ ದೀಪಿಕಾ, ಇಬ್ಬರು ಖ್ಯಾತ ಹಿರಿಯ ನಟಿಯರ ಜೊತೆ ಜಾಹಿರಾತಿನಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ. ಲಕ್ಸ್ ಜಾಹಿರಾತಿಗೆ 9 ವರ್ಷವಾಗಿದ್ದು ಇನ್ನಷ್ಟು ವರ್ಷದ ಪಯಣವಿದೆ. ಜಾಹಿರಾತಿನಲ್ಲಿ ಅವರೊಂದಿಗೆ ನಟಿಸಿದ ಕ್ಷಣ ತುಂಬಾ ವಿನೋದವಾಗಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ