ಬಾಲಿವುಡ್ ನಿರ್ದೇಶಕಿ-ನಿರ್ಮಾಪಕಿ ಕಿರಣ್ ರಾವ್
ಮುಂಬೈ: ಮುಂಬೈನ ಖಾರ್ ನ ಕಾರ್ಟರ್ ರಸ್ತೆಯಲ್ಲಿರುವ ಬಾಲಿವುಡ್ ನಿರ್ದೇಶಕಿ-ನಿರ್ಮಾಪಕಿ ಕಿರಣ್ ರಾವ್ ಅವರ ಮನೆಯಿಂದ ೮೦ ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಪತ್ನಿ ಕಿರಣ್ ರಾವ್. "ಕಿರಣ್ ಅವರ ತಂದೆ ನೀಡಿರುವ ದೂರಿನ ಪ್ರಕಾರ, ಒಂದು ವಜ್ರದ ಉಂಗುರ ಮತ್ತು ನೆಕ್ಲೆಸ್ ಸೇರಿದಂತೆ ೮೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಿರಣ್ ಅವರ ಅಪಾರ್ಟ್ಮೆಂಟ್ ನಿಂದ ಕಳವಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ದೂರಿನ ಪ್ರಕಾರ ಖಾರ್ ಪೊಲೀಸರು ಐಪಿಸಿ ನಿಯಮ ೩೮೦ರಡಿ (ನಿವಾಸದಲ್ಲಿ ಕಳವು) ಪ್ರಕರಣ ದಾಖಲಿಸಿಕೊಂಡಿದ್ದಾರೆ. "ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಕೆಲಸಗಾರರು ಮತ್ತು ಮತ್ತು ಇತರರನ್ನು ಪ್ರಶ್ನಿಸಿ ತನಿಖೆ ಪ್ರಾರಂಭಿಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದು, ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನು ಬಂಧಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics