ಐಶ್ವರ್ಯಾ ಬರೆದಿದ್ದಾರೆ ಎನ್ನಲಾಗುತ್ತಿರುವ ಸ್ಲ್ಯಾಮ್ ಬುಕ್ ನ ಪುಟ 
ಬಾಲಿವುಡ್

ಸ್ಲ್ಯಾಮ್ ಬುಕ್ ನಲ್ಲಿ ಐಶ್ವರ್ಯಾ ಇಷ್ಟದ ವಿಷಯಗಳು

ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚೆಗೆ ತಮ್ಮ ಮೊಮ್ಮಕ್ಕಳಿಗೆ ಬರೆದ ಬಹಿರಂಗ ಪತ್ರ ಭಾರೀ ಸುದ್ದಿಯಾಗಿತ್ತು. ಈಗ ಅವರ...

ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚೆಗೆ ತಮ್ಮ ಮೊಮ್ಮಕ್ಕಳಿಗೆ ಬರೆದ ಬಹಿರಂಗ ಪತ್ರ ಭಾರೀ ಸುದ್ದಿಯಾಗಿತ್ತು. ಈಗ ಅವರ ಸೊಸೆ ಐಶ್ವರ್ಯಾ ರೈ ಸರದಿ. ''ಏ ದಿಲ್ ಹೈ ಮುಷ್ಕಿಲ್'' ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಅತ್ಯಂತ ನಿಕಟ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಲ್ಲಿರುವ ಐಶ್ವರ್ಯಾ, ಇದೀಗ ಸ್ಲ್ಯಾಮ್ ಬುಕ್ ಮೂಲಕ ಮತ್ತಷ್ಟು ಸುದ್ದಿಯಾಗಿದ್ದಾರೆ.
ಐಶ್ವರ್ಯಾ ಬರೆದಿದ್ದು ಎಂದು ನಂಬಲಾಗಿರುವ ಸ್ಲ್ಯಾಮ್ ಬುಕ್ ನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿದ್ದು ಅದರಲ್ಲಿ ಕೆಲವು ಆಯ್ದ ಪ್ರಶ್ನೆಗಳಿಗೆ ಐಶ್ ಉತ್ತರ ನೀಡಿದ್ದಾರೆ. ಅವರು ಬರೆದ ಸ್ಲ್ಯಾಮ್ ಬುಕ್ ನ ಪುಟವೊಂದನ್ನು ಟ್ವಿಟ್ಟರ್ ನಲ್ಲಿ ಹಾಕಿ ಐಶ್ವರ್ಯಾ ರೈಯವರ ಕೈ ಬರಹದ ಸ್ಲ್ಯಾಮ್ ಬುಕ್ ಎಂದು ಪೋಸ್ಟ್ ಹಾಕಲಾಗಿದೆ. ಅವರು ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಬರಹಗಳಿವು ಎನ್ನಲಾಗುತ್ತಿದೆ. 
ಐಶ್ವರ್ಯಾ ಅವರ ಸ್ಲ್ಯಾಮ್ ಬುಕ್ ನಲ್ಲಿ ಏನಿದೆ, ಅವರಲ್ಲಿ ಏನು ಪ್ರಶ್ನೆಗಳನ್ನು ಕೇಳಲಾಗಿತ್ತು, ಅದಕ್ಕೆ ಅವರು ಏನು ಉತ್ತರ ನೀಡಿದ್ದರು ಎಂಬ ಕುತೂಹಲ ಕಾಡುವುದು ಸಹಜ. ಐ ಲವ್ ಎಂಬ ಪ್ರಶ್ನೆಗೆ ದ ಐಡಿಯಾ ಆಫ್ ಬೀಯಿಂಗ್ ಇನ್ ಲವ್ ಎಂದು ಐಶ್ ಉತ್ತರಿಸಿದ್ದಾರೆ. ನೀವು ಯಾರನ್ನು ಪ್ರೀತಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ನಾನು ಕತ್ತಲಲ್ಲಿರುವಾಗ ಬೆಳಕು ತೋರಿಸುವವರತ್ತ ಎಂದು ಉತ್ತರಿಸಿದ್ದಾರೆ. ಪ್ರಾಮಾಣಿಕತೆ, ಪ್ರೀತಿ, ನಂಬಿಕೆಗಳೇ ತಮ್ಮ ಬಲ, ಜೀವನದ ಪ್ರತಿ ಕ್ಷಣವನ್ನು ಜೀವಿಸುವುದು ಪ್ಯಾಷನ್, ಐಶ್ವರ್ಯಾ ಅವರ ಬಹುದೊಡ್ಡ ಅಗತ್ಯತೆ ಹಣ, ಮೇಕಪ್ ಅಥವಾ ಸ್ಟಾರ್ ಪಟ್ಟ ಅಲ್ಲವಂತೆ ಪರಿಶುದ್ಧ ವಾತಾವರಣ ನನ್ನ ಅಗತ್ಯ ಎಂದು ಹೇಳಿದ್ದಾರೆ.
ಆದರೆ ನೀವಿದು ಐಶ್ವರ್ಯಾ ಅವರ ಖಾಸಗಿ ಸ್ಲ್ಯಾಮ್ ಬುಕ್ ಎಂದು ಭಾವಿಸಿದರೆ ಅಲ್ಲವಂತೆ, ವಾಸ್ತವವಾಗಿ ಇದು ಮನರಂಜನಾ ಮ್ಯಾಗಜಿನ್ ಸ್ಟಾರ್ ಡಸ್ಟ್ ನ ವಿಶಿಷ್ಟ ಬರಹವಂತೆ. ಬಾಲಿವುಡ್ ತಾರೆಗಳ ಇಷ್ಟದ ವಿಷಯಗಳು ವಿಷಯದಡಿ ನಡೆಸಲಾದ ಸಂದರ್ಶನಗಳ ಆಯ್ದ ಬರಹಗಳಿವು. 
ಐಶ್ವರ್ಯಾ ಅಭಿಮಾನಿಗಳು ಐಶ್ ಹೆಸರಿನಲ್ಲಿ ಟ್ವಿಟ್ಟರ್ ನಲ್ಲಿ ತೆರೆದಿರುವ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಐಶ್ವರ್ಯಾ ಹೆಸರಿನಲ್ಲಿ ಕಳೆದೆರಡು ದಿನಗಳಿಂದ ಭಾರೀ ಸುದ್ದಿ ಮಾಡುತ್ತಿರುವುದಂತೂ ನಿಜ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!