ಬಾಲಿವುಡ್

ಸಿಬಿಎಫ್ ಸಿಯ ಕೆಲಸ ಸಿನಿಮಾಗಳಿಗೆ ಗ್ರೇಡ್ ನೀಡುವುದೇ ಹೊರತು, ಕತ್ತರಿ ಹಾಕುವುದಲ್ಲ: ಅಮೀರ್ ಖಾನ್

Sumana Upadhyaya
ಮುಂಬೈ: ದಂಗಲ್ ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನಟ ಅಮೀರ್ ಖಾನ್  ಕನಸು ಮತ್ತು ಸ್ಪೂರ್ತಿಯಾಧಾರಿತ ಚಿತ್ರ ಸೀಕ್ರೆಟ್ ಸೂಪರ್ ಸ್ಟಾರ್ ಮೂಲಕ ಮತ್ತೆ ಬಂದಿದ್ದಾರೆ. 14 ವರ್ಷದ ಹುಡುಗಿಯ ಜೀವನದಲ್ಲಿನ ಅಡೆತಡೆಗಳು ಮತ್ತು ಅದರಿಂದ ಅವಳು ಹೇಗೆ ಹೊರಬರುತ್ತಾಳೆ ಎಂಬದರ ಸುತ್ತ ಕಥೆ ಸಾಗುತ್ತದೆ.
ಚಿತ್ರದ ಟ್ರೇಲರ್ ನಿನ್ನೆ ಮುಂಬೈಯಲ್ಲಿ ನಡೆಯಿತು. ಝೈರಾ ವಾಝಿಮ್ ನಟಿಸಿರುವ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ಅಮೀರ್ ಖಾನ್ ಸಹನಟ ಮಾತ್ರವಲ್ಲದೆ ಚಿತ್ರದ ನಿರ್ಮಾಪಕರು ಕೂಡ ಹೌದು.  
ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ ಅಮೀರ್ ಖಾನ್ ಈ ಸಂದರ್ಭದಲ್ಲಿ ನವಾಜುದ್ದೀನ್ ಸಿದ್ದಿಕಿಯವರ ಬಾಬುಮೊಶೈ ಬದೂಕ್ ಬಾಝ್ ಚಿತ್ರ 48 ದೃಶ್ಯಗಳಿಗೆ ಕತ್ತರಿ ಹಾಕಿರುವ ಕೇಂದ್ರ ಚಲನಚಿತ್ರ ಪ್ರಮಾಣ ಮಂಡಳಿಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.
 ಈ ಬಗ್ಗೆ ಪತ್ರಕರ್ತರೊಬ್ಬರು ಚಿತ್ರಗಳಲ್ಲಿ ದೃಶ್ಯಗಳನ್ನು ತೆಗೆದುಹಾಕುವ ಮೂಲಕ ಕಲಾವಿದನ ಸೃಜನಶೀಲತೆಗೆ ಧಕ್ಕೆಯುಂಟಾಗುತ್ತದೆಯೇ ಎಂದು ಕೇಳಿದ್ದಕ್ಕೆ ಅಮೀರ್ ಖಾನ್, ಚಿತ್ರದಲ್ಲಿ ಸೆನ್ಸಾರ್ ಷಿಪ್ ಎಷ್ಟು ಮುಖ್ಯ ಎಂದು ನನಗೆ ಅರ್ಥವಾಗುತ್ತಿಲ್ಲ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಗ್ರೇಡ್ ನೀಡಬೇಕೆ ಹೊರತು ದೃಶ್ಯಗಳನ್ನು ತೆಗೆದುಹಾಕಲು ಸೂಚಿಸಬಾರದು. ಸೆನ್ಸಾರ್ ಷಿಪ್ ವಿಷಯವು ಸ್ವಲ್ಪ ಅಪ್ರಸ್ತುತ ಎನಿಸುತ್ತದೆ ಎಂದರು.
ಹೊಸ ನಿರ್ದೇಶಕ ಅದ್ವೈತ್ ಚಂದನ್ ನಿರ್ದೇಶಿಸಿರುವ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ದಂಗಲ್ ನಲ್ಲಿ ಗೀತಾ ಪಾತ್ರದಲ್ಲಿ ನಟಿಸಿದ್ದ ಝೈರಾ ವಾಸಿಮ್  ಇದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತಗಾರನಾಗಿ ಶಕ್ತಿ ಕುಮಾರ್ ಎಂದು ಅಮೀರ್ ಖಾನ್ ನಟಿಸಿದ್ದಾರೆ.
SCROLL FOR NEXT