ಆಮೀರ್ ಖಾನ್ 
ಬಾಲಿವುಡ್

ಮೂವರು ಖಾನ್ ಗಳಿಗಿಂತ ಹೆಚ್ಚಿನ ಪ್ರತಿಭೆಯಿರುವವರು ಬಾಲಿವುಡ್ ನಲ್ಲಿದ್ದಾರೆ: ಆಮೀರ್ ಖಾನ್

ಲಿವುಡ್ ಸ್ಟಾರ್ ಡಮ್ ಬಗ್ಗೆ ಮಾತನಾಡುವಾಗ ಮಾಧ್ಯಮಗಳು ಯಾವಾಗಲೂ ಮೂವರು ಖಾನ್ ಗಳ ಹೆಸರುಗಳನ್ನು ಪುನರುಚ್ಚಿಸುವುದರ ...

ಮುಂಬಯಿ: ಬಾಲಿವುಡ್ ಸ್ಟಾರ್ ಡಮ್ ಬಗ್ಗೆ ಮಾತನಾಡುವಾಗ ಮಾಧ್ಯಮಗಳು ಯಾವಾಗಲೂ ಮೂವರು ಖಾನ್ ಗಳ ಹೆಸರುಗಳನ್ನು ಪುನರುಚ್ಚಿಸುವುದರ ಬಗ್ಗೆ ನಟ-ನಿರ್ಮಾಪರ ಆಮೀರ್ ಖಾನ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಸೀಕ್ರೇಟ್ ಸೂಪರ್ ಸ್ಟಾರ್ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಸಿನಿಮಾಗಳು ರಿಲೀಸ್ ಆದ ಮೂರು ನಾಲ್ಕು ದಿನಗಳಿಗೆ 100 ಕೋಟಿ ರು ಗಳಿಸುತ್ತವೆ.ಆದರೆ ಇತ್ತೀಚೆಗೆ ಬಿಡುಗಡೆಯಾದ ಸಲ್ಮಾನ್ ಖಾನ್ ಅವರ ಟ್ಯೂಬ್ ಲೈಟ್ ಮತ್ತು ಶಾರುಖ್ ಖಾನ್ ಅವರ ಜಬ್ ಹ್ಯಾರಿ ಮೆಟ್ ಸೆಜಲ್ ಸಿನಿಮಾಗಳಿಗೆ ಆ ಭಾಗ್ಯ ದೊರೆತಿಲ್ಲ.
ಈ ಸಂಬಂಧ ಮಾಧ್ಯಮಗಳು ಆಮೀರ್ ಖಾನ್ ಅವರನ್ನು ಪ್ರಶ್ನಿಸಿದಾಗ ಪ್ರತಿಯೊಬ್ಬ ಕ್ರಿಯೇಟಿವ್ ವ್ಯಕ್ತಿಯ ಜೀವನದಲ್ಲಿ ಏರುಪೇರುಗಳಿರುತ್ತವೆ, ನಾವು ಯಾವಾಗಲೂ ಉತ್ತಮವಾದದ್ದನ್ನೇ ನೀಡಲು ಬಯಸುತ್ತೇವೆ. ಪ್ರತಿಯೊಬ್ಬರು ಸಿನಿಮಾ ಇಷ್ಟಪಡಲಿ ಎಂದು ಸಿನಿಮಾ ತಯಾರಿಸುತ್ತೇವೆ, ಕೆಲ ಸಮಯದಲ್ಲಿ ನಾವು ಯಶಸ್ವಿಯಾಗುತ್ತೇವೆ, ಕೆಲ ಸಮಯದಲ್ಲಿ ಫೇಲಾಗುತ್ತೇವೆ ಎಂದು ಹೇಳಿದ್ದಾರೆ. ಅದಕ್ಕಾಗಿ ನಾವು ಆಶ್ಚರ್ಯ ಪಡಬೇಕಿಲ್ಲ, ನಾವು ಯಾವುದರ ಮೇಲೆ ನಂಬಿಕೆಯಿಟ್ಟಿರುತ್ತೇವೋ ಅದನ್ನು ಮುಂದುವರಿಸಿಕೊಂಡಬೇಕು ಎಂದು ಸಲಹೆ ನೀಡಿದ್ದಾರೆ.
ಸ್ಟಾರ್ ಗಳ ಬಗ್ಗೆ ನೀವು ಮಾಧ್ಯಮದವರು ಯಾವಾಗ ಮಾತಮಾಡಿದರೂ ಕೇವಲ ಆಮೀರ್ , ಸಲ್ಮಾನ್ ಮತ್ತು ಶಾರೂಖ್ ಬಗ್ಗೆ ಮಾತ್ರ ಮಾತನಾಡುತ್ತೀರಿ, ಈ ಮೂವರನ್ನು ಹೊರತು ಪಡಿಸಿ ಬಾಲಿವುಡ್ ನಲ್ಲಿ ಹಲವು ಪ್ರತಿಭಾವಂತರಿದ್ದಾರೆ. ಅತಿ ದೊಡ್ಡ ಅಭಿಮಾನಿಗಳ ಸಮೂಹವನ್ನು ಹೊಂದಿರುವ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸಿನಿಮಾವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ ಎಂದು ತಿಳಿಸಿದ ಅವರು,  ಸಿಕ್ರೇಟ್ ಸೂಪರ್ ಸ್ಟಾರ್ ದೀಪಾವಳಿ ಗೆ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT