ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ
ಪಾರ್ಕ್ ನಲ್ಲಿ ಒಟ್ಟಿಗೆ ಕುಳಿತು ಸೆಲ್ಫಿ ತೆಗೆದುಕೊಂಡ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಸಂದೇಶವನ್ನು ಬರೆಯುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರೇಮಿಗಳ ದಿನದ ಸಂದರ್ಭದಲ್ಲಿ ತಮ್ಮ ಪ್ರೇಮವನ್ನು ಜಗಜ್ಜಾಹೀರುಪಡಿಸಿದ್ದಾರೆ.
ಅವರು ತಮ್ಮ ಸಂದೇಶದಲ್ಲಿ, ''ನೀವು ಬಯಸಿದರೆ ಪ್ರತಿದಿನವೂ ಪ್ರೇಮಿಗಳ ದಿನವಾಗಿರುತ್ತದೆ. ಪ್ರತಿದಿನವೂ ನೀನು ನನಗಾಗಿ ಇರುವಂತೆ ಕಾಣುತ್ತೀಯಾ ಎಂದು ಪ್ರೀತಿಯ ಗುರುತು ಹಾಕಿ ಬರೆದುಕೊಂಡಿದ್ದಾರೆ. ಅದರಲ್ಲಿ ಅನುಷ್ಕಾ ಹೆಸರನ್ನು ಟ್ಯಾಗ್ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ ಕೂಡಲೇ ತಮ್ಮ ಮನಸ್ಸು ಬದಲಾಯಿಸಿ ಫೋಟೋ ಡಿಲೀಟ್ ಮಾಡಿದ್ದಾರೆ. ಆದರೆ ಅವರ ಇನ್ಸ್ಟಾಗ್ರಾಮ್ ನಲ್ಲಿ ಇನ್ನು ಕೂಡ ಇದೆ ಮತ್ತು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಈ ಹಿಂದೆ ಕೊಹ್ಲಿ ಮತ್ತು ಅನುಷ್ಕಾ ಉತ್ತರಾಖಂಡ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಜನಪ್ರಿಯ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅದನ್ನು ಕೊಹ್ಲಿ ನಿರಾಕರಿಸಿದ್ದರು.
ವೃತ್ತಿಯಲ್ಲಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ಎದುರು ಇದೇ 23ರಿಂದ 4 ಟೆಸ್ಟ್ ಮ್ಯಾಚ್ ಗಳನ್ನು ಆಡಲಿದೆ. ಅನುಷ್ಕಾ ಅವರು ನಿರ್ಮಿಸಿ ನಟಿಸಿರುವ ಫಿಲ್ಲಾವುರಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics