ಬಾಲಿವುಡ್

ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದರೆ ಅವರ ಶಿರಚ್ಛೇದ ಮಾಡುವೆ: ಶಾರುಖ್

Manjula VN

ನವದೆಹಲಿ: ಯಾರೇ ಆದರೂ ಮಹಿಳೆಯರಿಗೆ ಗೌರವವನ್ನು ಕೊಡಬೇಕು. ನನ್ನ ಮಕ್ಕಳ ವಿಚಾರ ಬಂದರೂ ಸರಿ ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದ್ದೇ ಆದರೆ, ಅವರ ತಲೆಯನ್ನೂ ಕಡಿಯುತ್ತೇನೆಂದು ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರು ಹೇಳಿದ್ದಾರೆ.

ಫೆಮಿನಾಗೆ ನೀಡಿರುವ ಸಂದರ್ಶನದಲ್ಲಿ ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರವ ಅವರು, ಮಹಿಳೆಯರಿಗೆ ಗೌರವ ನೀಡಬೇಕೆಂದು ಆರ್ಯನ್ ಹಾಗೂ ಅಬ್ರಾಂಗೆ ಹೇಳಿದ್ದೇನೆ. ಒಂದು ವೇಳೆ ನೀವೇನಾದರೂ ಮಹಿಳೆಯರಿಗೆ ಅಗೌರವ ತೋರಿದ್ದೇ ಆದರೆ, ತಲೆ ಕಡಿಯುತ್ತೇನೆಂದು ಹೇಳಿದ್ದೇನೆ. ಸಮಯ ಎಂದಿಗೂ ಬದಲಾಗುವುದಿಲ್ಲ. ಯಾವುದೇ ಸಮಯ ಬಂದರೂ ಮಹಿಳೆಯರಿಗೆ ಗೌರವವನ್ನು ನೀಡಬೇಕು. ಯುವತಿಯರು ನಿಮ್ಮ ಚಡ್ಡಿ-ಬಡ್ಡಿಯಲ್ಲ. ಅವರಿಗೆ ಗೌರವವನ್ನು ನೀಡಿ ಎಂದು ಹೇಳಿದ್ದಾರೆ.

ಹೊಸವರ್ಷಾಚರಣೆ ದಿನದಂದು ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣಕ್ಕೆ ದೇಶದಾದ್ಯಂತ ಸಾಕಷ್ಟು ವಿರೋದಗಳು ವ್ಯಕ್ತವಾಗಿತ್ತು. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಮಿರ್ ಖಾನ್ ಹಾಗೂ ನಟಿ ಅನುಷ್ಕಾ ಶರ್ಮಾ ಸೇರಿದಂತೆ ಇನ್ನಿತರೆ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಲ್ಲದೆ, ರಾಜಕೀಯ ಕ್ಷೇತ್ರದಲ್ಲೂ ಕೆಸರೆರಚಾಟ ಆರಂಭವಾಗಿತ್ತು.

SCROLL FOR NEXT