ಬಾಲಿವುಡ್

ವರ್ಲ್ಡ್ ಸೌಂಡ್ ಟ್ರಾಕ್ ಅವಾರ್ಡ್ ಅಂತಿಮ ಪಟ್ಟಿಯಲ್ಲಿ ಎ.ಆರ್.ರಹಮಾನ್

Lingaraj Badiger
ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರು ವರ್ಲ್ಡ್ ಸೌಂಡ್ ಟ್ರಾಕ್ ಅವಾರ್ಡ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವೈಸರಾಯ್ ಹೌಸ್ ಚಿತ್ರದ ಸಂಗೀತಕ್ಕಾಗಿ ರೆಹಮಾನ್ ಅವರು ಸಾರ್ವಜನಿಕರ ಆಯ್ಕೆ ವಿಭಾಗದ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
'ವೈಸರಾಯ್ ಚಿತ್ರ' ವರ್ಲ್ಡ್ ಸೌಂಡ್ ಟ್ರಾಕ್ ಅವಾರ್ಡ್ ನ ಸಾರ್ವಜನಿಕ ವಿಭಾಗದ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆಯಾಗಿದೆ ಎಂದು ಹೇಳುವುದಕ್ಕೆ ಸಂತೋಷವಾಗುತ್ತಿದೆ ಎಂದು ರೆಹಮಾನ್ ಅವರು ಟ್ವೀಟ್ ಮಾಡಿದ್ದಾರೆ.
ಜಗತ್ತಿನ ಎಲ್ಲಾ ಸೌಂಡ್ ಟ್ರಾಕ್ ಮತ್ತು ಚಿತ್ರ ಸಂಗೀತ ಅಭಿಮಾನಿಗಳು ವೈಯಕ್ತಿಕವಾಗಿ ತಮ್ಮ ಮತ ಹಾಕುವ ಮೂಲಕ ವರ್ಡ್ ಸೌಂಡ್ ಟ್ರಾಕ್ ಸಾರ್ವಜನಿಕರ ಆಯ್ಕೆ ಪ್ರಶಸ್ತಿ 2017ರಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
SCROLL FOR NEXT