ಬಾಲಿವುಡ್ ನಟ ಅಕ್ಷಯ್ ಕುಮಾರ್ ಜತೆ ಸಿನಿಮಾ ಮಾಡೆ ಮಾಡ್ತೀನಿ ಇದರಲ್ಲಿ ಯಾವುದೇ ಅಪನಂಬಿಕೆ ಬೇಡ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್ ವಂದತಿಗಳನ್ನು ಕಿವಿಗೊಡಬೇಡಿ. ನನ್ನ ಮಾತು ಕೇಳಿ. ಏಕ್ ಬಾರ್ ಜೋ ಮೈನೆ ಕಮಿಟ್ಮೆಂಟ್ ಕರ್ ದಿ ತೋ ಫಿರ್...ಅಕ್ಷಯ್ ಜತೆ ಸಿನಿಮಾ ಮಾಡೆ ಮಾಡ್ತೀನಿ ಎಂದು ಟ್ವೀಟಿಸಿದ್ದಾರೆ.
ಕಳೆದ ವರ್ಷ ಸಲ್ಮಾನ್ ಖಾನ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ಜತೆಗೂಡಿ ಸಹ-ನಟ ಅಕ್ಷಯ್ ಕುಮಾರ್ ಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರ 2018ಕ್ಕೆ ತೆರೆಗೆ ಬರಲಿದ್ದು ರಾಷ್ಟ್ರ ಪ್ರಶಸ್ತಿ ವಿಜೇತ ಪಂಜಾಬಿ ನಿರ್ದೇಶಕ ಅನುರಾಗ್ ಸಿಂಗ್ ಈ ಚಿತ್ರವನ್ನು ನಿರ್ದೆಶಿಸುತ್ತಿದ್ದು ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.