ದಿ ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಹೇರ್ ಸ್ಟೈಲ್ ಲುಕ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ ಈ ಮಧ್ಯೆ ಬಾಲಿವುಡ್ ನಟ ಸಂಜಯ್ ದತ್ ಸಹ ಇದೇ ರೀತಿಯ ಹೇರ್ ಸ್ಟೈಲ್ ಮಾಡಿದ್ದಾರೆ.
ಸಂಜಯ್ ದತ್ ಅವರ ಮುಂದಿನ ಚಿತ್ರ ಸಾಹೇಬ್ ಬಿವಿ ಹೌರ್ ಗ್ಯಾಂಗ್‌ಸ್ಟರ್ 3 ದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದು ಅದಕ್ಕೆ ಬೇಕಾದಂತೆ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಜಯ್ ದತ್ ಅವರ ಹೇರ್ ಸ್ಟೈಲ್ ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಚಿತ್ರದ ಹೇರ್ ಸ್ಟೈಲ್ ನಂತೆ ಕಾಣುತ್ತಿದೆ. ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್ ಚಿತ್ರವನ್ನು ತಿಗ್ಮಾನ್ಷು ದುಲಿಯಾ ನಿರ್ದೇಶಿಸುತ್ತಿದ್ದಾರೆ.