ಬರ್ಲಿನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂದು ಜರ್ಮನಿ ರಾಜಧಾನಿ ಬರ್ಲಿನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.
ತಮ್ಮ ಹಾಲಿವುಡ್ ಚಿತ್ರ ಬೇವಾಚ್ ನ ಪ್ರಚಾರಕ್ಕಾಗಿ ಬರ್ಲಿನ್ ಗೆ ಆಗಮಿಸಿದ್ದ ನಟಿ ಪ್ರಧಾನಿಯವರನ್ನು ಭೇಟಿ ಮಾಡಿದ್ದನ್ನು ಟ್ವಿಟ್ಟರ್ ನಲ್ಲಿ ಫೋಟೋ ಹಾಕಿಕೊಂಡಿದ್ದಾರೆ.
''ಇಂದು ಬೆಳಗ್ಗೆ ನನಗೆ ಭೇಟಿ ಮಾಡಲು ಸಮಯ ಮಾಡಿಕೊಂಡದ್ದಕ್ಕಾಗಿ ಕೃತಜ್ಞತೆಗಳು. ಒಂದೇ ಸಮಯಕ್ಕೆ ಬರ್ಲಿನ್ ನಲ್ಲಿ ಸಿಕ್ಕಿರುವುದು ಕಾಕತಾಳೀಯ'' ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ನಾಲ್ಕು ದೇಶಗಳ ಆರು ದಿನಗಳ ಪ್ರವಾಸದ ಆರಂಭಕ್ಕೆ ಪ್ರಧಾನಿಯವರು ನಿನ್ನೆ ಜರ್ಮನಿಗೆ ಆಗಮಿಸಿದ್ದರು. ದ್ವಿಪಕ್ಷೀಯ ಆರ್ಥಿಕ ಸಹಕಾರ ಮತ್ತು ಭಾರತದ ಸುಧಾರಣೆಗೆ ಹೆಚ್ಚಿನ ಬಂಡವಾಳ ಹೂಡಿಕೆಗೆ ಪ್ರಮುಖ ನಾಯಕರನ್ನು ಆಹ್ವಾನಿಸಲು ಅವರು ಜರ್ಮನಿ, ಸ್ಪೈನ್, ರಷ್ಯಾ ಹಾಗೂ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ.