ಮುಂಬೈ: ನಟಿ-ನಿರ್ಮಾಪಕಿ ದಿಯಾ ಮಿರ್ಜಾ ಭಾರತಕ್ಕೆ ಯುಎನ್ ಪರಿಸರ ಸದ್ಭಾವನಾ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಭಾರತೀಯ ವನ್ಯಜೀವಿ ಟ್ರಸ್ಟ್ ನ ರಾಯಭಾರಿಯೂ ಆಗಿರುವ ದಿಯಾ ಜಾಗತಿಕ ಪರಿಸರ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ. ಜತೆಗೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪರಿಸರದ ಕುರಿತಂತೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ.
"ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ವಿಶ್ವ ಸಂಸ್ಥೆಯೊಡನೆ ಕೆಲಸ ಮಾಡಲು ಸಿಕ್ಕ ಈ ಅವಕಾಶದಿಂದ ನನಗೆ ಗೌರವ ಮತ್ತು ಸ್ಫೂರ್ತಿ ದೊರಕಿದೆ. ಪರಿಸರ ಸಮಸ್ಯೆ ಈ ಯುಗದ ಮಹತ್ವದ ಸವಾಲಾಗಿದೆ, ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಒದಗಿಸಲು ನಾನು ಈ ಕೆಲಸ ನಿರ್ವಹಿಸಲು ಸಿದ್ದಳಿದ್ದೇನೆ. ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ವಿಶ್ವ ಸಂಸ್ಥ್ಗೆ ಸಹಕರಿಸಲು ಬದ್ದಳಾಗಿದ್ದೇನೆ" ದಿಯಾ ಹೇಳಿದರು.
ಪ್ರಕೃತಿಯ ಸಂರಕ್ಷಣೆ ಕೆಲಸವನ್ನು ನಾವು ಒಟ್ಟಾಗಿ ಮುಂದುವರಿಯುತ್ತೇವೆ" ದಿಯಾ ಮಿರ್ಜಾ ವಿವರಿಸಿದರು. ಶುದ್ದ ಗಾಳಿ, ಸ್ವಚ್ಛ ಸಮುದ್ರಗಳು, ವನ್ಯಜೀವಿ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಆದ್ಯತೆಯ ಕ್ಷೇತ್ರಗಳಲ್ಲಿ ಇನ್ನಷ್ಟು ಸಂದೇಶಗಳನ್ನು ಹರಡಲು ಡಿಯಾ ವಿಶ್ವಸಂಸ್ಥೆಯೊಡನೆ ಕೆಲಸ ಮಾಡಲಿದ್ದಾರೆ.
"ದಿಯಾ ಅವರನ್ನು ಯು ಎನ್ ಪರಿಸರ ಸದ್ಭಾವನಾ ರಾಯಭಾರಿಯಾಗಿ ನೇಮಿಸಿಕೊಳ್ಳಲು ನಾವು ಸಂತೋಷ ಪಡುತ್ತೇವೆ. ಭಾರತವು ಹಲವು ಸವಾಲುಗಳನ್ನು ಎದುರಿಸುತ್ತಿದೆ, ನಿರ್ದಿಷ್ಟವಾಗಿ ಹೇಳಬೇಕೆಂದರೆ ದೇಶದ ಅನೇಕ ನಗರಗಳಲ್ಲಿ ಉಸಿರುಗಟ್ಟಿಸುವ ವಾಯು ಮಾಲಿನ್ಯ ಇದೆ. ದಿಯಾ ರಾಯಭಾರಿಯಾಗುವುದರಿಂದ ಸನ್ನಿವೇಶವನ್ನು ಬದಲಿಸಲು, ಭಾರತೀಯರಿಗೆ ಹಾಗೂ ಭಾರತದ ಪರಿಸರಕ್ಕೆ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಲು ಇದರಿಂದ ಸಹಕಾರ ದೊರೆಯಲಿದೆ." ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥ ಎರಿಕ್ ಸೊಲ್ಹಿಮ್ ಹೇಳಿದ್ದಾರೆ