ವೆರೈಟಿ 500 ಪಟ್ಟಿಯಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್, ಪ್ರಿಯಾಂಕ 
ಬಾಲಿವುಡ್

ವೆರೈಟಿ 500 ಪಟ್ಟಿಯಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್, ಪ್ರಿಯಾಂಕ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಪ್ರಿಯಾಂಕ ಚೋಪ್ರಾ ಅವರು ವೆರೈಟಿ ಪಟ್ಟಿಯ ಮನರಂಜನಾ ಕ್ಷೇತ್ರದಲ್ಲಿನ 500 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಪ್ರಿಯಾಂಕ ಚೋಪ್ರಾ ಅವರು ವೆರೈಟಿ ಪಟ್ಟಿಯ ಮನರಂಜನಾ ಕ್ಷೇತ್ರದಲ್ಲಿನ 500  ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
 "ಸಲ್ಮಾನ್ ಖಾನ್ ಅವರು ಅಮೀರ್ ಮತ್ತು ಶಾರುಖ್ ಅವರನ್ನು ಒಳಗೊಂಡ ಖಾನ್ ತ್ರಿಮೂರ್ತಿಗಳಲ್ಲೊಬ್ಬರು ಇವರು ಬಾಲಿವುಡ್ ಗಲ್ಲಾಪೆಟ್ಟಿಗೆಯನ್ನು ದಶಕಗಳಿಂದ ಆಳುತ್ತಿದ್ದಾರೆ." ಎಂದು ವೆರೈಟಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ. ಸಲ್ಮಾನ್ ಖಾನ್ ಅವರ ಇತ್ತೀಚಿನ ಮತ್ತು ಮುಂಬರುವ ಚಿತ್ರಗಳ ಪಟ್ಟಿಯನ್ನೂ ಕೂಡ ಟ್ವೀಟ್ ಹೊಂದಿದೆ, ಜೊತೆಗೆ ಅವರ ದತ್ತಿ ಸಂಸ್ಥೆಯಾದ ಬೀಯಿಂಗ್ ಹ್ಯೂಮನ್ ಕುರಿತ ಸುದ್ದಿಯೂ ಇದೆ.
ಇವರೆ ಅಲ್ಲದೆ ಪಟ್ಟಿಯಲ್ಲಿ ಇನ್ನೂ ಹತ್ತು ಭಾರತೀಯರು ಸ್ಥಾನ ಪಡೆದಿದ್ದಾರೆ. ಕರಣ್ ಜೋಹರ್, ಆದಿತ್ಯ ಚೋಪ್ರಾ, ಏಕ್ತಾ ಕಪೂರ್, ಅಂಬಾನಿ ಸಹೋದರರು, ಸಿಧಾರ್ಥ್ ರಾಯ್ ಕಪೂರ್, ಪುನಿತ್ ಗೋಯೆಂಕಾ, ಕಿಶೋರ್ ಲುಲ್ಲಾ, ಉದಯ್ ಶಂಕರ್ ಮತ್ತು ಸುಭಾಷ್ ಚಂದ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಭಾರತೀಯರಾಗಿದ್ದಾರೆ
ಒಂದು ವರ್ಷದ ಅವಧಿಯಲ್ಲಿ ಮನರಂಜನಾ ಉದ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ಆದವರ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ವೆರೈಟಿ 500 ಪಟ್ಟಿಯನ್ನು ತಯಾರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್