ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಿಯಲ್ ಮತ್ತು ರೀಲ್ ತಂದೆಯ ಜತೆ ಫೋಟೋಗೆ ಪೋಸು ನೀಡಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಂಎಸ್ ಧೋನಿ ಜೀವನಾಧಾರಿತ ಚಿತ್ರ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿಯಲ್ಲಿ ಧೋನಿ ತಂದೆಯ ಪಾತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ನಟಿಸಿದ್ದರು. ಅನುಪಮ್ ಖೇರ್ ಅವರು ಇತ್ತೀಚೆಗಷ್ಟೇ ರಾಂಚಿಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಧೋನಿ ಮನೆಗೆ ಭೇಟಿ ನೀಡಿ ಧೋನಿ ಮತ್ತು ಅವರ ತಂದೆ ಪಾನ್ ಸಿಂಗ್ ಧೋನಿ ಜತೆ ಫೋಟೋ ತೆಗೆಸಿಕೊಂಡಿದ್ದರು.
ಈ ಫೋಟೋವನ್ನು ಅನುಪಮ್ ಖೇರ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು ಫೋಟೋ ವೈರಲ್ ಆಗಿದೆ. ಇನ್ನು ಫೋಟೋಗೆ ಟ್ವೀಟರಿಗರು ಲೈಕ್ ಹಾಗೂ ಕಮೆಂಟ್ ಮಾಡುತ್ತಿದ್ದಾರೆ.