ಅನಪಮ್ ಖೇರ್ 
ಬಾಲಿವುಡ್

ಎಫ್ ಟಿಐಐ ಕ್ಯಾಂಪಸ್ ಗೆ ನೂತನ ಅಧ್ಯಕ್ಷ ಅನುಪಮ್‌ ಖೇರ್‌ ದಿಢೀರ್ ಭೇಟಿ

ಹಿರಿಯ ಬಾಲಿವುಡ್ ನಟ ಹಾಗೂ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ(ಎಫ್‌ಟಿಐಐ)ಯ ನೂತನ ಅಧ್ಯಕ್ಷ ಅನುಪಮ್‌ ಖೇರ್‌

ಮುಂಬೈ: ಹಿರಿಯ ಬಾಲಿವುಡ್ ನಟ ಹಾಗೂ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ(ಎಫ್‌ಟಿಐಐ)ಯ ನೂತನ ಅಧ್ಯಕ್ಷ ಅನುಪಮ್‌ ಖೇರ್‌ ಅವರು ಸೋಮವಾರ ದಿಢೀರ್ ಕ್ಯಾಂಪಸ್ ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ತಾವು ವಿದ್ಯಾರ್ಥಿಗಳ ಪರವಾಗಿರುವುದಾಗಿ ಭರವಸೆ ನೀಡಿದ್ದಾರೆ.
ಸಾಮಾಜಿಕ ತಾಣದಲ್ಲಿ ಲೈವ್ ವಿಡಿಯೋ ಮೂಲಕ ತಾವು ಎಫ್ ಟಿಐಐ ಕ್ಯಾಂಪಸ್ ಗೆ ತೆರಳುತ್ತಿರುವುದಾಗಿ ತಿಳಿಸಿರುವ ಅನುಪಮ್ ಖೇರ್ ಅವರು, ಸಾಮಾನ್ಯ ವ್ಯಕ್ತಿಯಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮೂಲಕಅಲ್ಲಿನ ಸೆಕ್ಯೂರಿಟಿ ಗಾರ್ಡ್ಸ್, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಅಚ್ಚರಿ ಮೂಡಿಸಿದ್ದಾರೆ.
1978ರಲ್ಲಿ ನಾನು ಕಲಿತ ಸಂಸ್ಥೆ, ನನ್ನ ನಟನೆಗೆ ಅಡಿಪಾಯ ಹಾಕಿದ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆಗೆ ಇಂದು ನಾನು ಭೇಟಿ ನೀಡುತ್ತಿದ್ದೇನೆ. ಆದರೆ ಅದರ ಅಧ್ಯಕ್ಷನಾಗಿ ಅಲ್ಲ. ಒಬ್ಬ ವಿದ್ಯಾರ್ಥಿಯಾಗಿ ಬಂದಿದ್ದೇನೆ. ಈ ನಾನು ಇಲ್ಲಿಗೆ ಬರುವ ವಿಷಯ ಯಾರಿಗೂ ತಿಳಿಸಿಲ್ಲ. ಏಕೆಂದರೆ ನಾನು ಮತ್ತೆ ವಿದ್ಯಾರ್ಥಿಯಾಗಿ ಇಲ್ಲಿಗೆ ಬರಲು ಬಯಸಿದ್ದೆ ಎಂದು ಖೇರ್ ಹೇಳಿಕೊಂಡಿದ್ದಾರೆ.
ನಾನು ಕಳೆದ 33 ವರ್ಷಗಳಲ್ಲಿ ಸುಮಾರು 508 ಚಿತ್ರಗಳನ್ನು ಮಾಡಿದ್ದೇನೆ ಮತ್ತು 120 ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಇದಕ್ಕೆ ಕಾರಣ ಈ ಎಫ್ ಟಿಐಐ. ಹೀಗಾಗಿ ನಾನು ಒಬ್ಬ ವಿನಮ್ರ ವಿದ್ಯಾರ್ಥಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಅನುಪಮ್ ಖೇರ್ ಅವರು ತಮ್ಮ ಲೈವ್ ವಿಡಿಯೋದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ