ಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಪ್ರಭಾಸ್ ಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಯಾಗಿತ್ತು.
ಬಾಹುಬಲಿ ಚಿತ್ರದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಕರಣ್ ಜೋಹಾರ್, ಪ್ರಭಾಸ್ ರನ್ನು ಹಿಂದಿ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಬೇಕು ಎಂದುಕೊಂಡಿದ್ದರು. ಆದರೆ ಈಗ ಅವರ ಯೋಜನೆ ಕೈಗೂಡುವಂತೆ ಕಾಣುತ್ತಿಲ್ಲ.
ಇದಕ್ಕೆ ಕಾರಣ ಪ್ರಭಾಸ್ ಕೇಳಿರುವ ದುಬಾರಿ ಸಂಭಾವನೆ. ಹೌದು ಪ್ರಭಾಸ್ ಬರೋಬ್ಬರಿ 20 ಕೋಟಿ ರುಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ದಕ್ಷಿಣ ಭಾರತದಲ್ಲಿ ತಮ್ಮ ಸಂಭಾವನೆಯನ್ನು 30 ಕೋಟಿಗೆ ಏರಿಸಿಕೊಂಡಿದ್ದಾರೆ. ಆದರೆ ಅವರಿಗೆ ಬಾಲಿವುಡ್ ನಲ್ಲಿ 20 ಕೋಟಿ ಸಂಭಾವನೆ ಕೇಳುವಷ್ಟು ದೊಡ್ಡ ಮಾರುಕಟ್ಟೆ ಅವರಿಗಿಲ್ಲ. ಹೀಗಾಗಿ ಕರಣ್ ಜೋಹಾರ್ ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ.
ಈ ಬಗ್ಗೆ ಪ್ರಭಾಸ್ ಆಗಲಿ, ಕರಣ್ ಜೋಹಾರ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.