ಸಲ್ಮಾನ್ ಖಾನ್ 
ಬಾಲಿವುಡ್

ಮುಂಬೈ: ಸಲ್ಮಾನ್ ಖಾನ್ ಭೇಟಿಗೆ ಮನೆಬಿಟ್ಟು ಬಂದು ಕಾಂಪೌಂಡ್ ಗೋಡೆ ಏರಿದ ಬಾಲಕಿ!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದ ಆಕರ್ಷಿತಗೊಂಡ ಬಾಲಕಿಯೊಬ್ಬಳು ಅವರನ್ನು ನೋಡಲೆಂದು ಮಧ್ಯಪ್ರದೇಶದಿಂದ ಮನೆಬಿಟ್ಟು ಮುಂಬೈಗೆ ಬಂದಿದ್ದು, ಬಾಂದ್ರದಲ್ಲಿನ ಪೊಸ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಏರಿ ಪ್ರಯತ್ನಿಸಿದ್ದಾಳೆ.

ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದ ಆಕರ್ಷಿತಗೊಂಡ ಬಾಲಕಿಯೊಬ್ಬಳು ಅವರನ್ನು ನೋಡಲೆಂದು  ಮಧ್ಯಪ್ರದೇಶದಿಂದ ಮನೆಬಿಟ್ಟು  ಮುಂಬೈಗೆ ಬಂದಿದ್ದು, ಬಾಂದ್ರದಲ್ಲಿನ ಪೊಸ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಏರಿ ಪ್ರಯತ್ನಿಸಿದ್ದಾಳೆ.

ನಂತರ 15 ವರ್ಷದ ಆ ಬಾಲಕಿಯನ್ನು ವಶಕ್ಕೆ ಪಡೆದು  ಮಕ್ಕಳ ವಸತಿ ನಿಲಯಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಬೆರಸಿಯಾ ನಿವಾಸಿದ ಈ ಬಾಲಕಿ , ಸಲ್ಮಾನ್ ಖಾನ್ ಭೇಟಿ ಸಲುವಾಗಿ ಭಾನುವಾರ ಮನೆ ಬಿಟ್ಟಿದ್ದಾಳೆ .ನಂತರ ರೈಲಿನಲ್ಲಿ ದೂರದ ಮುಂಬೈಗೆ ಬಂದಿದ್ದು, ನಿನ್ನೆ ಬೆಳಿಗ್ಗೆ ಬಾಂದ್ರಾ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾಳೆ.

 ಬಾಂದ್ರಾದಲ್ಲಿ ಸಲ್ಮಾನ್ ಖಾನ್ ಮನೆ ಇರುವುದನ್ನು ತಿಳಿದ ಆ ಬಾಲಕಿ ,ನೇರವಾಗಿ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದು, ಗೇಟ್ ಮೂಲಕ ಅಪಾರ್ಟ್ ಮೆಂಟ್ ನ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ್ದಾಳೆ. ಆದರೆ, ಸ್ಥಳದಲ್ಲಿಯೇ ಇದ್ದ ಭದ್ರತಾ ಪಡೆಗಳು ಇದನ್ನು ತಡೆದಿದ್ದಾರೆ.

ನಂತರ ಆ ಬಾಲಕಿ ಕಟ್ಟಡದ ಗೋಡೆ ಕಾಂಪೌಂಡ್ ಏರಲು  ಪ್ರಯತ್ನಿಸಿದ್ದಾಳೆ. ಮತ್ತೆ ಭದ್ರತಾ ಸಿಬ್ಬಂದಿಗಳು ಇದನ್ನು ತಡೆದಿದ್ದು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆ ಬಾಲಕಿಯನ್ನು   ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

 ಆಧಾರ್ ಕಾರ್ಡ್ ಆಧಾರದ ಮೇಲೆ ಆ ಬಾಲಕಿ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ . ನಂತರ ಪ್ರಾಥಮಿಕ ವಿಚಾರಣೆ ಬಳಿಕ ಆ ಬಾಲಕಿಯನ್ನು ಮಕ್ಕಳ ವಸತಿಗೆ ಸೇರಿಸಲಾಗಿದೆ. ಮುಂಬೈಗೆ ಆಕೆಯ ಪೋಷಕರು ಬಂದ ನಂತರ ಅವರ ವಶಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!