ಮುಂಬಯಿ: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ, ಒಬ್ಬ ಹೆಂಡತಿ, ಮಗಳು, ಸೊಸೆ ಹಾಗೂ ತಾಯಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಎಂದಿಗೂ ತಮ್ಮ ವೃತ್ತಿ ಜೀವನ ಹಾಗೂ ಜನಪ್ರಿಯತೆ ಅಡ್ಡ ಬಂದಿಲ್ಲ . ತಮ್ಮ ಮಗಳು ಆರಾಧ್ಯ ಇರುವ ವಾತಾವರಣ ಸದಾ ಸಹಜವಾಗಿರುವಂತೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.
ದೇಶದ ಅತಿ ದೊಡ್ಡ ಜನಪ್ರಿಯ ವ್ಯಕ್ತಿಯಾಗಿರುವ ಐಶ್ವರ್ಯ ತಮ್ಮ ಮಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹೇಗೆ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ ಎಂಬುದೇ ರಹಸ್ಯವಾಗಿದೆ,
ನಾನು 18 ವರ್ಷದವಳಾಗಿದ್ದಾಗ ಬೆಳಗ್ಗೆ 5.30ಕ್ಕೆ ಏಳುತ್ತಿದ್ದೆ, ಆಗ ನನ್ನ ಮೇಲೆ ಕೆಲವೊಂದು ಜವಾಬ್ದಾರಿಗಳಿದ್ದವು, ಅದನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ, ಆರಾಧ್ಯ ಬಂದ ಮೇಲೆ ನನ್ನ ಆದ್ಯತೆಗಳಲ್ಲೆ ಬದಲಾಗಿವೆ, ಆಕೆ ಮೊದಲು, ಉಳಿದದ್ದೆಲ್ಲಾ ಎರಡನೇಯದ್ದು ಎಂದು ಹೇಳಿದ್ದಾರೆ,
ಮೊದಲ ಬಾರಿಗೆ ಆರಾಧ್ಯ ಆಕೆಯ ತಾಯಿಯ ಸಿನಿಮಾ ನೋಡುತ್ತಿದ್ದಾಳೆ.,ಟಿವಿಯಲ್ಲಿ ನನ್ನ ಹಾಡುಗಳನ್ನು ನೋಡುತ್ತಾಳೆ, ಆದರೆ ಮೊದಲ ಬಾರಿಗೆ ಇಡೀ ಫನ್ನಿಖಾನ್ ಸಿನಿಮಾ ನೋಡಿದ್ದಾಳೆ.
ನನ್ನ ಫರ್ಪಾರ್ಮೆನ್ಸ್ ಬಗ್ಗೆ ಅವಳಲ್ಲಿ ಕೇಳಿದರೇ ಅವಳ ನಗುವೆ ಎಲ್ಲವನ್ನು ಹೇಳುತ್ತದೆ, ಫನ್ನಿಖಾನ್ ಸಿನಿಮಾದ ಹಾಡೊಂದರ ಶೂಟಿಂಗ್ ನಲ್ಲಿ ನೋಡಿದ್ದಳು, ಅದಾದ ನಂತರ ತನ್ನ ಸ್ನೇಹಿತರು ಹಾಗೂ ಅವರ ಪೋಷಕರೊಂದಿಗೆ ಸಿನಿಮಾ ನೋಡುವ ಬಯಕೆ ವ್ಯಕ್ತ ಪಡಿಸಿದ್ದಳು, ಅದಾದ ನಂತರ ಆಕೆಯ ಎಲ್ಲಾ ಸ್ನೇಹಿತರು ಮತ್ತು ಪೋಷಕರ ಜೊತೆ ಉತ್ತಮ ಸಮಯ ಕಳೆದಿದ್ದಳು.
ನಾನು ನಟಿಸಿರುವ ಫನ್ನಿಖಾನ್ ಸಿನಿಮಾವನ್ನು ಮೊದಲ ಬಾರಿಗೆ ಆಕೆ ವೀಕ್ಷಿಸಿದ್ದು ನನಗೆ ಬಹಳ ಖುಷಿಯ ವಿಚಾರ, ಈ ಸಿನಿಮಾದಲ್ಲಿ ಒಂದು ಉತ್ತಮ ಸಂದೇಶವಿದೆ, ಎಲ್ಲಾ ವಯಸ್ಸಿನ ಪ್ರೇಕ್ಷಕರು ನೋಡುವಂತ ಸಿನಿಮಾವಾಗಿದೆ,ಮಕ್ಕಳು ನೋಡಬಾರದು ಎಂದು ಹೇಳುವಂತ ವಿಷಯ ಯಾವುದು ಇಲ್ಲ.
ಮನೆಯಲ್ಲಿ ಆರಾಧ್ಯ ಹಾಡು ಹಾಡುವುದು ಹಾಗೂ ಡ್ಯಾನ್ಸ್ ಮಾಡುತ್ತಿರುತ್ತಾಳೆ, ಕೆಲವೊಮ್ಮೆ ನನ್ನ ಹಾಡಿಗೆ, ಮತ್ತೆ ಅವಳ ತಂದೆ ಹಾಗೂ ತಾತ ನಟಿಸಿರುವ ಹಾಡಿಗೆ ಹೆಜ್ಜೆ ಹಾಕುತ್ತಾಳೆ. ಮನೆಯಲ್ಲಿ ಇದು ಕಾಮನ್. ಆರಾಧ್ಯ ಇರುವ ವಾತಾವಾರಣ ಯಾವಾಗಲೂ ಸಹಜವಾಗಿ ಇರುವಂತೆ ನಾವು ನೋಡಿಕೊಳ್ಳುತ್ತೇವೆ.
ಮಕ್ಕಳನ್ನು ದಾದಿಯರೊಂದಿಗೆ ಬಿಡುವ ಸ್ಟಾರ್ ಅಮ್ಮಂದಿರಂತಿಲ್ಲ ಐಶ್ವರ್ಯ., ಆರಾಧ್ಯನಿಗೆ ಒಬ್ಬ ದಾದಿಯಿದ್ದಾರೆ, ಇಬ್ಬರು ದಾದಿಯರು ಇರಬೇಕೆಂದು ನಾನು ಬಯಸಿದ್ದೆ, ಏಕೆಂದರೇ ನಾನು ಒಬ್ಬರನ್ನು ಹೊಂದಿದ್ದೆ, ನಾನು ದೀರ್ಘಾವಧಿ ರಜೆ ತೆಗೆದುಕೊಳ್ಳಬೇಕೆಂದು ಅನಿಸುತ್ತದೆ, ಆದರೆ ಅದು ಪ್ರಮುಖ ವಿಷಯವಲ್ಲ, ಆರಾಧ್ಯಗೆ ಎಲ್ಲವನ್ನು ನಾನೇ ಮಾಡಬೇಕೆಂಬ ಆಸೆ ನನಗೆ, ಆದರೆ ನನ್ನ ಶೆಡ್ಯೂಲ್ ನಡುವೆ ಎಲ್ಲವನ್ನು ನನಗೆ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ನನ್ನ ತಾಯಿ ಮಾಡುತ್ತಾರೆ, ನಾನು ಯಾವಾಗಲು ನನ್ನ ತಾಯಿಯ ಕೈಯಲ್ಲೇ ಬೆಳೆದೆ ಎಂದು ಐಶ್ ನೆನಪಿಸಿಕೊಳ್ಳುತ್ತಾರೆ.
ವೃತ್ತಿ ಜೀವನದ ಜೊತೆ ಸಂಸಾರದ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಷ್ಟು ಸುಲಭದ ಕೆಲಸವಲ್ಲ, ಕೆಲಸ ಮಾಡುವ ಎಲ್ಲಾ ಮಹಿಳೆಯರು ಹೀರೋಗಳೇ, ಅದಕ್ಕೆ ಕೆಲ ಸಮಯ ಬೇಕಾಗುತ್ತದೆ, ಅದೃಷ್ಟಕ್ಕೆ ನನಗೆ ತುಂಬಾ ಪ್ರೋತ್ರಾಹಿಸುವ ಹಾಗೂ ನನ್ನ ಬೆಂಬಲಿಸುವ ಪತಿ ಸಿಕ್ಕಿದ್ದಾರೆ ಎಂದು ಐಶ್ವರ್ಯಾ ಹೇಳಿದ್ದಾರೆ.
ಐಶ್ವರ್ಯ ಆಯ್ಕೆಯ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಕರಣ್ ಜೋಹರ್ ಅವರ ಏ ದಿಲ್ ಮುಷ್ಕಿಲ್ ಹೈ ಮತ್ತು ಫನ್ನಿಖಾನ್ ನಂತಹ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ,
ಫನ್ನಿ ಖಾನ್ ನಲ್ಲಿ ನನ್ನ ಪಾತ್ರ ಅತಿ ಚಿಕ್ಕದ್ದು ಎಂದು ನನಗೆ ತಿಳಿದಿತ್ತು. ಸಿನಿಮಾ ಪ್ರಮೋಶನ್ ನಲ್ಲಿ ಭಾಗವಹಿಸಿದಾಗ ನಾನು ಅದನ್ನು ಎಲ್ಲಿಯೂ ಹೇಳಿಲ್ಲ.. ನಾನು ಸಿನಿಮಾದುದ್ದಕ್ಕೂ ಇದ್ದೇನೆ ಎಂಬಂತ ಇಂಪ್ರೆಶನ್ ನೀಡಿದ್ದೆ, ಆ ಸಿನಿಮಾ ಕಥೆ ನನಗೆ ಹೇಳಿ ಬರೆಸಿದ್ದ ಹಾಗಿತ್ತು, ಒಮ್ಮೆ ನಾನು ಬೋರ್ಡ್ ಗೆ ಬಂದ ಮೇಲೆ ನಾನು ಪಾತ್ರದಲ್ಲಿ ಪೂರ್ತಿ ಲೀನವಾಗಿ ಬಿಡುತ್ತೇನೆ ಎಂದು ಹೇಳಿದ್ದಾರೆ.