ಮುಂಬೈ: ಲಂಡನ್ ನಲ್ಲಿ ಟೀಂ ಇಂಡಿಯಾ ಜತೆ ಗ್ರೂಪ್ ಫೋಟೊದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ನಾನು ವಿವಾದಕ್ಕೆ ಒಳಗಾಗುವುದಿಲ್ಲ ಎಂದಿದ್ದಾರೆ.
ನಾನು ಗ್ರೂಪ್ ಫೋಟೋದಲ್ಲಿ ಕಾಣಿಸಿಕೊಂಡಿರುವುದರಿಂದ ಯಾವ ನಿಯಮಾವಳಿ ಉಲ್ಲಂಘನೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. "ಇದು ಟ್ರೋಲರ್ ಗಳ ಕೆಲಸವಾಗಿಉದೆ. ನಾನು ಈ ಟ್ರೋಲ್ ಗಳಿಗೆ ಪ್ರತಿಕ್ರಯಿಸಲಾರೆ, ಟ್ರೋಲ್ ಬಗೆಗೆ ನಾನು ಗಮನ ನೀಡಲಾರೆ"
"ಏನು ಸಂಭವಿಸಿದೆಯೋ ಅದು ಮಾರ್ಗದರ್ಶಿ ಸೂತ್ರಕ್ಕೆ ಅನುಸಾರವಾಗಿಒದೆ, ಇನ್ನೇನು ಸಂಭವಿಸಲಿದೆಯೋ ಅದು ಸಹ ಮಾರ್ಗದರ್ಶಿ ಸೂತ್ರಕ್ಕೆ ಅನುಸಾರವಾಗಿರಲಿದೆ.ಇದರಲ್ಲಿ ಯಾವ ಅನುಮಾನಕ್ಕೆ ಆಸ್ಪದವಿಲ್ಲ" "ಸುಯಿ ದಾಗಾ" ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅನುಷ್ಕಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅನುಷ್ಕಾ ಮತ್ತು ಅವರ ಪತಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಂಡನ್ ನ ಭಾರತೀಯ ಹೈಕಮಿಷನರ್ ಕಛೇರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಏರ್ಪಡಿಸಿದ್ದ ವಿಶೇಷ ಔತಣ ಕೂಟದಲ್ಲಿ ಭಾಗವಹಿಸಿ ಆ ಸಂದರ್ಭ ತೆಗೆಯಲಾದ ಗ್ರೂಪ್ ಫೋಟೋದಲ್ಲಿ ಕಾಣಿಸಿಕೊಂಡಿದ್ದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಈ ಭಾವಚಿತ್ರವನ್ನು ಹಂಚಿಕೊಂಡಿತ್ತು. ಇದು ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಈಡಾಗಿದು ನೆಟ್ಟಿಗರು ಬಿಸಿಸಿಐ ಇಬ್ಬಗೆ ನೀತಿ ವಿರುಧ ಕಿಡಿಕಾರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics