ಬಾಲಿವುಡ್

ಹಿಂದೂ, ಕ್ರಿಶ್ಚಿಯನ್ ಶೈಲಿಯ ಮದುವೆ ಫೋಟೋ ಹಂಚಿಕೊಂಡ ಪ್ರಿಯಾಂಕಾ

Lingaraj Badiger
ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕಳೆದ ಶನಿವಾರ ಅಮೆರಿಕದ ಗಾಯಕ ನಿಕ್ ಜೋನಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಸತಿ-ಪತಿಗಳಾಗಿದ್ದರು.
ಪ್ರಿಯಾಂಕಾ ಚೋಪ್ರಾ ಅವರು ಇಂದು ಅಧಿಕೃತವಾಗಿ ತಾವು ಹಿಂದೂ ಹಾಗೂ ಕ್ರಿಶ್ಚಿಯನ್ ಶೈಲಿಯಲ್ಲಿ ವದು-ವರರಾಗಿ ಮಿಂಚಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಹಿಂದೂ ಶೈಲಿಯ ವಿವಾಹಕ್ಕಾಗಿ ಸಬ್ಯಸಾಚಿ ವಿನ್ಯಾಸಗೊಳಿಸಿದ ಕೆಂಪು ಬಣದ ಲೆಹೆಂಗಾ, ಚೋಲಿ ಮತ್ತು ದುಪ್ಪಟ್ಟ ಧರಿಸಿದ್ದು, ನಿಕ್ ಶೆರ್ವಾನಿ ಧರಿಸಿದ್ದಾರೆ.
ಇನ್ನು ಕ್ರಿಶ್ಚಿಯನ್ ವಿವಾಹಕ್ಕಾಗಿ ಪ್ರಿಯಾಂಕಾ 75 ಅಡಿ ಉದ್ದದ ಮುಸುಕಿನೊಂದಿಗೆ ಮಣಿಗಳಿಂದ ಅಲಂಕರಿಸಿದ್ದ ರಾಲ್ಪ್ ಲಾರೆನ್ ಗೌನ್ ಗೌನ್ ಧರಿಸಿದರೆ, ಟುಕ್ಸೆಡೊ ಶೂಟ್ ಧರಿಸಿದ್ದರು.
SCROLL FOR NEXT