ಬಾಲಿವುಡ್

ಮೈನವಿರೇಳಿಸುವಂತಿದೆ ಸರ್ಜಿಕಲ್ ಸ್ಟ್ರೈಕ್ ಘಟನೆ ಆಧಾರಿತ ಉರಿ ಚಿತ್ರದ ಟ್ರೇಲರ್!

Srinivas Rao BV
2016 ರಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಗಡಿ ಪ್ರದೇಶಕ್ಕೆ ನುಗ್ಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನೆಯನ್ನು ಆಧರಿಸಿ ಆದಿತ್ಯ ಧರ್ ನಿರ್ದೇಶಿಸಿರುವ ಉರಿ ಚಿತ್ರದ ಟ್ರೇಲರ್ ಡಿ.05 ರಂದು ಬಿಡುಗಡೆಯಾಗಿದೆ. 
2.24 ನಿಮಿಷದಷ್ಟಿರುವ ಚಿತ್ರದ ಟ್ರೇಲರ್ ನಲ್ಲಿ "ಈ ಸಿನಿಮಾ ಭಾರತೀಯ ಸೇನಾ ಪಡೆಗೆ ಸಲ್ಲಿಸಿರುವ ಗೌರವ" ಎಂದು ಹೇಳಲಾಗಿದೆ.  ವಿಕಿ ಕುಶಾಲ್, ಯಾಮಿ ಗೌತಮ್, ಪರೇಶ್ ರಾವಲ್ ನಟಿಸಿದ್ದು, ಪರೇಶ್ ರಾವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಪಾತ್ರದಲ್ಲಿ, ವಿಕಿ ಸೇನಾ ಅಧಿಕಾರಿಯ ಪಾತ್ರದಲ್ಲಿ, ಯಾಮಿ ಗುಪ್ತಚರ ಇಲಾಖೆ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. 
SCROLL FOR NEXT