ಇತ್ತೀಚೆಗಷ್ಟೇ ಇಟಾಲಿಯಲ್ಲಿ ರಣ್ವೀರ್ ಸಿಂಗ್ ಜೊತೆ ವಿವಾಹವಾಗಿದ್ದ ದೀಪಿಕಾ ಪಡುಕೋಣೆ ಫೋರ್ಬ್ಸ್ ಮುಖಪುಟದಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
2018 ನೇ ಸಾಲಿನಲ್ಲಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸೆಲಬ್ರಿಟಿಗಳ ಕುರಿತಾದ ವಿಶೇಷ ಸಂಚಿಕೆಗಾಗಿ ರೂಪಿಸಿರುವ ಫೋರ್ಬ್ಸ್ ಮುಖಪುಟಕ್ಕೆ ದೀಪಿಕಾಪಡುಕೋಣೆ ಹಾಟ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ.
ಕೇವಲ ಬ್ಲ್ಯೂ ಸ್ವೆಟರ್ ಧರಿಸಿ ಕೂತಿರುವ ದೀಪಿಕಾ ಪಡುಕೋಣೆಯ ಫೋಟೋ ವೈರಲ್ ಆಗಿದ್ದು, ದೀಪಿಕಾ-ರಣ್ ವೀರ್ ಸಿಂಗ್ ವಿವಾಹದಲ್ಲಿ ಫೋಟೋಗ್ರಫಿ ಮಾಡಿದ್ದ ಎರ್ರಿಕೋಸ್ ಆಂಡ್ರ್ಯೂ ಅವರೇ ಫೋರ್ಬ್ಸ್ ಮುಖಪ್ಪುಟಕ್ಕೂ ಫೋಟೋ ಸೆರೆ ಹಿಡಿದಿದ್ದಾರೆ.