ದೀಪಿಕಾ ಪಡುಕೋಣೆ 
ಬಾಲಿವುಡ್

2018 ಭಾರತೀಯ ಸಿನಿಮಾ ಟಾಪ್ ಸ್ಟಾರ್ : ಶಾರೂಕ್ ಖಾನ್ ಹಿಂದಿಕ್ಕಿದ ದೀಪಿಕಾ -ಐಎಂಡಿಬಿ

ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸಿನಿಮಾ ವೆಬ್ ಸೈಟ್ ಐಎಂಡಿಬಿ ಪ್ರಕಾರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2018 ಭಾರತೀಯ ಸಿನಿಮಾದ ಟಾಪ್ ಸ್ಟಾರ್ ಆಗಿದ್ದು, ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.

ಮುಂಬೈ: ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸಿನಿಮಾ ವೆಬ್ ಸೈಟ್ ಐಎಂಡಿಬಿ ಪ್ರಕಾರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  2018 ಭಾರತೀಯ ಸಿನಿಮಾದ ಟಾಪ್ ಸ್ಟಾರ್  ಆಗಿದ್ದು, ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.

2018  ಭಾರತೀಯ ಸಿನಿಮಾದ ಟಾಪ್ 10 ಸ್ಟಾರ್ ಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದ್ದು, ಈ ಪೈಕಿ ದೀಪಿಕಾ ಪಡುಕೋಣೆ ಮೊದಲ ಸ್ಥಾನದಲ್ಲಿದ್ದರೆ, ಸೂಪರ್ ಸ್ಟಾರ್ ಶಾರೂಖ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ.  ನಂತರದ ಸ್ಥಾನಗಳಲ್ಲಿ  ಅಮಿರ್ ಖಾನ್, ಐಶ್ವರ್ಯ ರೈ ಬಚ್ಚನ್,  ಸಲ್ಮಾನ್ ಖಾನ್,  ಕತ್ರಿನಾ  ಕೈಪ್,  ಕುಬ್ರಾ ಸೇಠ್, ಇರ್ಪಾನ್ ಖಾನ್, ರಾಧಿಕಾ ಅಪ್ಟೆ ಹಾಗೂ ಅಕ್ಷಯ್ ಕುಮಾರ್ ಇದ್ದಾರೆ.

ಈ ವರ್ಷ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅತ್ಯುತ್ತಮ ರೀತಿಯಲ್ಲಿ ಪ್ರದರ್ಶನ ನೀಡಿರುವುದು ಅವರನ್ನು  ಅಗ್ರ ಸ್ಥಾನ ಪಡೆಯುವಂತೆ ಮಾಡಿದೆ ಎಂದು ಐಎಂಡಿಬಿ  ಮುಖ್ಯಸ್ಥ ನೆಹಾ ಗುರೆಜಾ ಹೇಳಿದ್ದಾರೆ.

 ಇನ್ನೂ 2018ರ ವರ್ಷದಲ್ಲಿ ಐಎಂಡಿಬಿ ಟಾಪ್ ಭಾರತೀಯ ಸಿನಿಮಾಗಳ ಪೈಕಿ ಅಂಧಾಧುನ್ ನಂಬರ್ 1 ಸ್ಥಾನ ಪಡೆದುಕೊಂಡಿದ್ದರೆ, ಅಕ್ಷಯ್ ಕುಮಾರ್ ಅಭಿಯನದ ಪ್ಯಾಡ್ ಮನ್  ಆರನೇ ಸ್ಥಾನದಲ್ಲಿದೆ.
ಈ ಚಿತ್ರಗಳಲ್ಲಿ ಅಭಿನಯಿಸಿರುವ ರಾಧಿಕಾ ಅಪ್ಟೆ  ಬಗ್ಗೆ ಉತ್ತಮ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದ್ದು, ಇದಲ್ಲದೇ ಟಾಪ್ 10ರಲ್ಲಿ ಇತರ ಸ್ಟಾರ್ ಗಳು ಸ್ಥಾನಗಳ ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!