ಮುಂಬೈ: ಬಾಲಿವುಡ್ ನಟಿ ಜೀನತ್ ಅಮಾನ್ ಅವರನ್ನು ಹಿಂಬಾಲಿಸುತ್ತಿದ್ದ ಉದ್ಯಮಿಯೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಕಳೆದ ತಿಂಗಳ 30 ರಂದು ಜೀನತ್ ಅಮಾನ್ ಸಲ್ಲಿಸಿದ್ದ ದೂರಿನ ಅನ್ವಯ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ . ಪದೇ ಪದೇ ಹಿಂಬಾಲಿಸುವುದು ಹಾಗೂ ಆಶ್ಲೀಲ ಸಂದೇಶ ಕಳುಹಿಸಿದ್ದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 304. ಮತ್ತು 509ರ ಅನ್ವಯ ದೂರು ದಾಖಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿ ಜೀನತ್ ಅಮಾನ್ ಹಾಗೂ ಬಂಧಿತ ಉದ್ಯಮಿ ಪರಸ್ಪರ ಪರಿಚಿತರು. ಆದರೆ, ಕೆಲ ವಿವಾದಗಳಿಂದ ಮನಸ್ತಾಪ ಉಂಟಾಗಿ ಜೀನತ್ ಮಾತು ನಿಲ್ಲಿಸಿದ್ದಳು. ಆದಾಗ್ಯೂ, ಆರೋಪಿ ಪದೇ ಪದೇ ಹಿಂಬಾಲಿಸುವುದು ಮತ್ತು ಕರೆ ಮಾಡುತ್ತಿದ್ದ . ಇದನ್ನು ನಿಲ್ಲಿಸುವಂತೆ ಮಾಡಿಕೊಂಡ ಮನವಿಗೂ ಬಗ್ಗದ ಹಿನ್ನೆಲೆಯಲ್ಲಿ ಜುಹು ಠಾಣೆಯಲ್ಲಿ ಜೀನತ್ ದೂರು ದಾಖಲಿಸಿದ್ದರು.