ಸನ್ನಿ ಲಿಯೋನ್ ನ್ನು ಹಿಂದಿಕ್ಕಿದ ಪ್ರಿಯಾ ಪ್ರಕಾಶ್, ಗೂಗಲ್ ಮೋಸ್ಟ್ ಸರ್ಚಿಂಗ್ ನಟಿ!
ನವದೆಹಲಿ: ವೈರಲ್ ವೀಡಿಯೋದಿಂದ ಹೆಸರಾದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಬಾಲಿವುಡ್ ನ ಸನ್ನಿ ಲಿಯೋನ್ ಅವರನ್ನು ಹಿಂದಿಕ್ಕಿ ಗೂಗಲ್ ನಲ್ಲಿ ಮೋಸ್ಟ್ ಸರ್ಚಿಂಗ್ ನಟಿ ಎನಿಸಿಕೊಂಡಿದ್ದಾರೆ.
ಪ್ರಿಯಾ ಪ್ರಕಾಶ್ ಅವರ ಮುದ್ದಾದ ನಗು ಹಾಗೂ ವಿಂಕಿಂಗ್ ನಿಂದಾಗಿ ಮಲಯಾಳಂ ಚಿತ್ರ 'ಒರು ಆಧಾರ್ ಲವ್' ನ ಹಾಡೊಂದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು. ಹದಿನೆಂಟರ ವಯೋಮಾನದ ಪ್ರಿಯಾ ಒಂದೇ ದಿನದಲ್ಲಿ ದೇಶದಾದ್ಯಂತ ಹೆಸರಾಗಿದ್ದರು.
ಗೂಗಲ್ ನಲ್ಲಿ ಅತ್ಯಂತ ಹೆಚ್ಚು ಹುಡುಕಾಟಕ್ಕೆ ಒಳಗಾಗುತ್ತಿದ್ದ ಸನ್ನಿ ಲಿಯೋನ್ ಅವರನ್ನೂ ಹಿಂದಿಕ್ಕಿದ ಪ್ರಿಯಾ ಗೂಗಲ್ ಸರ್ಚ್ ನ ಟಾಪ್ ನಟಿ ಎನಿಸಿದ್ದಾರೆ. ಪ್ರಿಯಾ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅವರನ್ನು ಸುಮಾರು ಮೂರು ಮಿಲಿಯನ್ ಗೆ ಹೆಚ್ಚು ಮಂದಿ ಹಿಂಬಾಲಿಸುತ್ತಿರುವುದು ಕಂಡಾಗ ನಟಿ ರಾತ್ರೋ ರಾತ್ರಿ ಅದೆಷ್ಟು ಮಟ್ಟಿಗೆ ಸಾಮಾಜಿಕ ತಾಣದ ಕೇಂದ್ರಬಿಂದುವಾಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics