ಬಾಲಿವುಡ್

ಭಾರತಕ್ಕೆ ಶ್ರೀದೇವಿ ಪಾರ್ಥಿವ ಶರೀರ ಕೊಂಡೊಯ್ಯಲು ದುಬೈ ಪೊಲೀಸರ ಅನುಮತಿ

Vishwanath S
ದುಬೈ: ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕಾಗಿ ದುಬೈಗೆ ತೆರಳಿದ್ದ ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಅವರು ಅನಿರೀಕ್ಷಿತವಾಗಿ ನಮ್ಮನ್ನು ಅಗಲಿರುವ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ದುಬೈ ಪೊಲೀಸರು ಅನುಮತಿ ನೀಡಿದ್ದಾರೆ. 
ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಸಂರಕ್ಷಣೆ ಮಾಡಿ ನಂತರ ಶ್ರೀದೇವಿ ಕುಟುಂಬಕ್ಕೆ ಪಾರ್ಥಿವ ಶರೀರವನ್ನು ದುಬೈ ಪೊಲೀಸರು ನೀಡಲಿದ್ದಾರೆ. 
ಸದ್ಯ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ದುಬೈ ಪೊಲೀಸರು ಶ್ರೀದೇವಿ ಕುಟುಂಬಕ್ಕೆ ನಿರಪೇಕ್ಷಣಾ ಪತ್ರವನ್ನು ನೀಡಿದ್ದಾರೆ. ಪಾರ್ಥಿವ ಶರೀರವನ್ನು ಸಂರಕ್ಷಣೆ ಮಾಡಿದ ಬಳಿಕ ಅಲ್ಲಿನ ಭಾರತೀಯ ರಾಯಬಾರಿ ಕಚೇರಿಗೆ ಗೌರವಪೂರ್ವಕವಾಗಿ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಲಾಗುವುದು. ಆನಂತರ ಕುಟುಂಬಸ್ಥರು ಅವರ ಪಾರ್ಥಿವ ಶರೀರ ಮುಂಬೈಗೆ ತರಲಿದ್ದಾರೆ. 
ದುಬೈನ ಎಮಿರೇಟ್ಸ್‌ ಟವರ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀದೇವಿ ಅವರು ಬಾತ್‌ರೂಮ್‌ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್‌ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿ ನೀಡಿತ್ತು.
ದುಬೈನ ಜನರಲ್‌ ಡಿಪಾರ್ಟ್‌ಮೆಂಟ್‌ ಆಫ್‌ ಫೋರೆನ್ಸಿಕ್‌ನಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾರ್ಥಿವ ಶರೀರವನ್ನು ಪೊಲೀಸರಿಗೆ ಒಪ್ಪಿಸಿತ್ತು. ಅಲ್ಲಿನ ಕಾನೂನು ಪ್ರಕಾರ ದುಬೈ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿ ಇದೀಗ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ನಿರಪೇಕ್ಷಣಾ ಪತ್ರ ನೀಡಿದ್ದಾರೆ.
SCROLL FOR NEXT