ಗೂಗಲ್ ಗರ್ಲ್, ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಕರೆನ್ಜಿತ್ ಕೌರ್ ಟೀಸರ್ ಬಿಡುಗಡೆಯಾಗಿದೆ. ಸನ್ನಿಗೆ ರೀಲ್ ಗಂಡನಾಗಿ ದಕ್ಷಿಣ ಆಫ್ರಿಕಾದ ನಟ ಮಾರ್ಕ್ ಬಕನರ್ ಕಾಣಿಸಿಕೊಳ್ಳುತ್ತಿದ್ದಾರೆ.
ಸನ್ನಿ ಲಿಯೋನ್ ಕೆನಾಡದಿಂದ ಭಾರತಕ್ಕೆ ಬಂದಿದ್ದು ಯಾಕೆ?. ಕರೆನ್ಜಿತ್ ಕೌರ್ ಮೂಲ ಹೆಸರನ್ನು ಸನ್ನಿ ಎಂದು ಹೆಸರು ಬದಲಿಸಿಕೊಂಡಿದ್ದು ಯಾಕೆ ಎಂಬ ಅನೇಕ ವಿಚಾರಗಳಿಗೆ ಈ ವೆಬ್ ಸಿರೀಸ್ ನಲ್ಲಿ ಉತ್ತರ ದೊರೆಯಲಿದೆ. ಇನ್ನು ಸನ್ನಿ ಪಾತ್ರದಲ್ಲಿ ಸನ್ನಿ ಲಿಯೋನ್ ಅವರೇ ನಿರ್ವಹಿಸಲಿದ್ದಾರೆ.
ವೆಬ್ ಸಿರೀಸ್ ನ ಟೀಸರ್ ಅನ್ನು ಸನ್ನಿ ಲಿಯೋನ್ ಬಿಡುಗಡೆ ಮಾಡಿದ್ದಾರೆ. 40 ಸೆಕೆಂಡ್ ನ ವಿಡಿಯೋ ಬಯೋಪಿಕ್ ಸುಳಿವು ನೀಡುತ್ತಿದೆ.
ಸದ್ಯ ಸನ್ನಿ ಲಿಯೋನ್ ತಮಿಳಿನ ವೀರ ಮಹಾದೇವಿ ಎಂಬ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ.