ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ನಟನೆಯ ಅಬ್ ತಕ್ ಚಪ್ಪನ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಚಿತ್ರ ಸಂಭಾಷಣೆಕಾರ ರವಿಶಂಕರ್ ಅಲೋಕ್ ಎಂಬುವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನ ಪಶ್ಚಿಮ ಅಂಧೇರಿಯಾ ಸೆವೆನ್ ಬಂಗ್ಲಾಸ್ ಪ್ರದೇಶದಲ್ಲಿ ವಾಸವಾಗಿದ್ದ 32 ವರ್ಷದ ರವಿಶಂಕರ್ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಾವ ಕಾರಣಕ್ಕೆ ರವಿಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಪೊಲೀಸರ ಪ್ರಕಾರ ರವಿಶಂಕರ್ ಖಿನ್ನತೆಗೆ ಒಳಗಾಗಿದ್ದು ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.