ಮುಂಬೈ: ದಸ್ ಕ ದಮ್ ರಿಯಾಲಿಟಿ ಶೋ ಮೂಲಕ ಸ್ಟಾರ್ ನಟರಾದ ಕಮಲ್ ಹಾಸನ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಕಮಲ್ ಹಾಸನ್ ತಮ್ಮ ಅಭಿನಯದ ವಿಶ್ವರೂಪಂ 2 ಚಿತ್ರದ ಪ್ರಚಾರದಲ್ಲಿ ತೊಡಗಿದ್ದು ಸಲ್ಮಾನ್ ಖಾನ್ ನಿರೂಪಣೆಯ ದಸ್ ಕ ದಮ್ ರಿಯಾಲಿಟಿ ಶೋನಲ್ಲಿ ಚಿತ್ರದ ಕುರಿತಂತೆ ಪ್ರಚಾರಪಡಿಸಲಾಗುತ್ತದೆ. ವಿಶ್ವರೂಪಂ 2 ಚಿತ್ರದ ಹಿಂದಿ ಆವೃತ್ತಿಯ ರೈಟ್ಸ್ ಅನ್ನು ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ಅನಿಲ್ ಅಂಬಾನಿಯ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಖರೀದಿಸಿದೆ.
ಇನ್ನು ಇಬ್ಬರು ಸ್ಟಾರ್ ನಾಯಕರು ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಾರೆ. ಹಿಂದಿಯ ಆವೃತ್ತಿಯ ಬಿಗ್ ಬಾಸ್ ಶೋ ಅನ್ನು ಸಲ್ಮಾನ್ ಖಾನ್ ಹಾಗೂ ತಮಿಳಿನ ಬಿಗ್ ಬಾಸ್ ಅನ್ನು ಕಮಲ್ ಹಾಸನ್ ನಡೆಸಿಕೊಡುತ್ತಾರೆ.
2013ರಲ್ಲಿ ತೆರೆಕಂಡಿದ್ದ ವಿಶ್ವರೂಪಂ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಆಗ್ರಹ ಕೇಳಿಬಂದಿತ್ತು ಈ ವೇಳೆ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಚಿತ್ರದ ವಿಶೇಷ ಪ್ರದರ್ಶನವನ್ನು ಕಂಡಿದ್ದರು.
ವಿಶ್ವರೂಪಂ 2 ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರ ಆಗಸ್ಟ್ 10ಕ್ಕೆ ದೇಶಾದ್ಯಂತ ತೆರೆಕಾಣುತ್ತಿದ್ದು ತಮಿಳು, ಹಿಂದಿ ಹಾಗೂ ತೆಲುಗು ಮೂರು ಭಾಷೆಯಲ್ಲೂ ತೆರೆಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics