ಮುಂಬಯಿ: ಪಾಕಿಸ್ತಾನ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಪ್ ಅಧ್ಯಕ್ಷ ಇಮ್ರಾನ್ ಖಾನ್ ಗೆಲುವು ಸಾಧಿಸಿರುವುದು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಉತ್ತಮವಾಗಲು ಸಹಕಾರಿಯಾಗುತ್ತದೆ ಎಂದು ಬಾಲಿವುಡ್ ಹಿರಿಯ ನಾಯಕ ರಿಷಿ ಕಪೂರ್ ಹೇಳಿದ್ದಾರೆ.
ಭಾರತದೊಂದಿಗಿನ ಸಂಬಂಧ ವೃದ್ಧಿಗಾಗಿ ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿರುವ ಇರ್ಮಾನ್ ಖಾನ್ ಅವರ ಹೇಳಿಕೆಯನ್ನು ರಿಷಿ ಕಪೂರ್ ಸ್ವಾಗತಿಸಿದ್ದಾರೆ. ಇಮ್ರಾನ್ ಖಾನ್ ಗೆಲುವಿನ ನಂತರದ ಭಾಷಣವನ್ನು ಟ್ವೀಟ್ ಮಾಡಿರುವ ರಿಷಿ ಕಪೂರ್., ಕಳೆದ ಎರಡು ದಿನಗಳಿಂದ ಭಾರತ-ಪಾಕಿಸ್ತಾನ ಸಂಬಂಧದ ಬಗ್ಗೆ ನೀವು ನೀಡಿರುವ ಹೇಳಿಕೆಗಳು ಸ್ವಾಗತಾರ್ಹ ಎಂದು ಟ್ವೀಟ್ ಮಾಡಿದ್ದಾರೆ.