ಮುಂಬೈ: ಬಾಲಿವುಡ್ ನಟಿ, ಮೋಹಕ ತಾರೆ ಶ್ರೀದೇವಿ ಅಕಾಲಿಕ ನಿಧನದ ಬಳಿಕ ಅವರ ಹಿರಿಯ ಪುತ್ರಿ ಜಾನ್ವಿ ಕಪೂರ್ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ನಿಮ್ಮ ತಂದೆ - ತಾಯಿಯನ್ನು ಪ್ರೀತಿಸಿ ಎಂದು ತಮ್ಮ ಇನ್‌ಸ್ಟಾಗ್ರಾಮ್‍ನಲ್ಲಿ ಭಾವನಾತ್ಮಕವಾದ ಬರಹವನ್ನು ಹಂಚಿಕೊಂಡಿದ್ದಾರೆ.
ಜಾನ್ವಿ ಮಾರ್ಚ್ 7ರಂದು ತನ್ನ 21ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ನಿಮ್ಮ ತಂದೆ ತಾಯಿಯನ್ನು ಪ್ರೀತಿಸಿ. ಅವರನ್ನು ಖುಷಿಪಡಿಸಿ ಮತ್ತು ಪೋಷಕರು ಹೆಮ್ಮೆ ಪಡುವಂತೆ ಮಾಡಿ ಎಂದು ಜನತೆಯಲ್ಲಿ ಕೇಳಿಕೊಂಡಿದ್ದಾರೆ.
ಅಮ್ಮ ನೀನು ದೂರವಾದ ಪ್ರತಿಕ್ಷಣವೂ ನನ್ನೊಂದಿಗೆ ಇದ್ದಂತೆ ಅನ್ನಿಸುತ್ತದೆ. ಎಂದಿಗೂ ನಿನ್ನ ಪ್ರೀತಿ ನನ್ನ ಸುತ್ತಲೂ ಇದ್ದಂತೆ ಭಾವಿಸುತ್ತೇನೆ ಎಂದು ಜಾನ್ವಿ ಹೇಳಿದ್ದಾರೆ. ಇದ್ದಕ್ಕಿದ್ದಂತೆ ಅಂಧಕಾರವಾದ ತನ್ನ ಜೀವನದಲ್ಲಿ ತಾಯಿಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮುಂದೆ ಸಾಗುತ್ತೇನೆ ಎಂದಿದ್ದಾರೆ.
ಈಗಲೂ ಪ್ರೀತಿಯನ್ನು ಪಡೆಯುತ್ತಿದ್ದೇನೆ. ನೋವು, ಸಂಕಟದಿಂದ ನೀನೇ ನನ್ನನ್ನು ರಕ್ಷಿಸುತ್ತೀಯ ಎಂದುಕೊಳ್ಳುತ್ತಿದ್ದೇನೆ. ಪ್ರತಿ ಬಾರಿ ನಾನು ಕಣ್ಣುಮುಚ್ಚಿಕೊಂಡರೆ ನನಗೆ ಒಳ್ಳೆಯ ಸಂಗತಿಗಳೇ ಕಾಣಿಸುತ್ತವೆ. ಅವೆಲ್ಲವನ್ನು ನೀನು ಕೊಟ್ಟಿದ್ದೇ. ನೀನು ತುಂಬಾ ಒಳ್ಳೆಯವರು. ಸ್ವಚ್ಛವಾದ ಮನಸ್ಸು, ಪ್ರೀತಿ ಇರುವ ತಾಯಿ. ಹಾಗಾಗಿಯೇ ದೇವರು ನಿನ್ನನ್ನು ಕರೆದೊಯ್ದ. ನಾನು ತುಂಬಾ ಸಂತೋಷವಾಗಿ ಇರುತ್ತೀನಿ ಎಂದು ಫ್ರೆಂಡ್ಸ್ ಹೇಳುತ್ತಿರುತ್ತಾರೆ. ಅದಕ್ಕೆ ಕಾರಣ ನೀನೇ ಎಂದಿದ್ದಾರೆ.
ನನಗೆ ಯಾವಾಗಲೂ ಯಾವುದೇ ಕಷ್ಟ, ನೋವು, ನಿಶ್ಯಕ್ತಿ ಅನ್ನಿಸಲೇ ಇಲ್ಲ. ಅದಕ್ಕೆ ಕಾರಣ ನೀನೇ ಅಮ್ಮಾ. ನನ್ನನ್ನು ತುಂಬಾ ಪ್ರೀತಿಸಿದೆ. ನೀನು ನನ್ನ ಆತ್ಮದ ಭಾಗ. ನಿನ್ನ ಸಂಪೂರ್ಣ ಜೀವನವನ್ನು ನಮಗಾಗಿ ಧಾರೆ ಎರೆದೆ. ಹಾಗಾಗಿಯೇ ಇನ್ನು ಮುಂದೆ ನೀನು ಹೆಮ್ಮೆಪಡುವಂತೆ ಇರುತ್ತೀವಿ. ಪ್ರತಿ ದಿನ ನಿನ್ನನ್ನು ಸ್ಮರಿಸಿಯೇ ಕೆಲಸ ಆರಂಭಿಸುತ್ತೇನೆ. ಎಂದಿನಂತೆಯೇ ನಿನ್ನನ್ನು ನಿದ್ದೆಯಿಂದ ಎಬ್ಬಿಸಲ್ಲ. ಯಾಕೆಂದರೆ ನೀನು ಇಲ್ಲೇ ನಮ್ಮೊಂದಿಗೆ ಇದ್ದೀಯ ಎಂದು ಭಾವಿಸಿದ್ದೇನೆ. ನೀನು ನನ್ನಲ್ಲಿ, ಖುಷಿಯಲ್ಲಿ, ಅಪ್ಪನಲ್ಲಿದ್ದೀಯ' ಎಂದು ಭಾವನಾತ್ಮಕವಾಗಿ ಜಾನ್ವಿ ತನ್ನ ಭಾವೋದ್ವೇಗಗಳನ್ನು ಹೊರಹಾಕಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos