ದೀಪಿಕಾ ಪಡುಕೋಣೆ-ರಣವೀರ್ ವಿವಾಹ ನಿಕ್ಕಿ, ಇಲ್ಲಿದೆ ಲೇಟೆಸ್ಟ್ ಸುದ್ದಿ!
ಮುಂಬೈ: ಬಾಲಿವುಡ್ ನ ಹಾಟ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರನವೀರ್ ಸಿಂಗ್ ಅವರ ವಿವಾಹ ಖಾತರಿಯಾಗಿದೆ. ಇನ್ನು ನಾಲ್ಕು ತಿಂಗಳಿನಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂದು ಅವರ ಕುಟುಂಬದ ಅಧಿಕೃತ ಮೂಲಗಳು ಮಾಹಿತಿ ನೀಡಿದೆ.
ಇದಾಗಲೇ ಮುಂಬೈನಲ್ಲಿರುವ ರಣವೀರ್ ಮನೆಗೆ ತೆರಳಿರುವ ದೀಪಿಕಾ ಪೋಷಕರು ಅವರ ವಿವಾಹ ದಿನವನ್ನು ನಿಶ್ಚಯ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವಾರ್ಲಿಯ ಹೋಟೆಲ್‍ನಲ್ಲಿ ಎರಡೂ ಕುಟುಂಬ ಸದಸ್ಯರು ಒಟ್ಟಾಗಿ ಕಾಣಿಸಿಕೊಂಡಿದ್ದು ಈ ಸುದ್ದಿಗೆ ಇನ್ನಷ್ಟು ಬಲ ನೀಡುತ್ತಿದೆ.
ಮುಂಬೈ ಹಾಗೂ ದೆಹಲಿಯಲ್ಲಿ ನಟ ರನವೀರ್ ಸಂಬಂಧಿಕರಿದ್ದ ಕಾರಣ ದೀಪಿಕಾ ಹಾಗೂ ರಣವೀರ್ ಅವರ ವಿವಾಹವು ಮುಂಬೈನಲ್ಲಿಯೇ ನಡೆಯಲಿದೆ ಎಂದು ರಣವೀರ್ ಕುಟುಂಬ ಹೇಳಿದೆ. ಇದಾಗಲೇ ಎರಡೂ ಕುಟುಂಬದವರು ಮದುವೆ ಶಾಪಿಂಗ್ ನಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು ದಕ್ಷಿಣ ಬಾರತೀಯ ಸಂಪ್ರದಾಯದ ಅನುಸಾರ ವಿವಾಹವು ನೆರವೇರುತ್ತದೆ.
ದೀಪಿಕಾ ಇದೀಗ ವಿಶಾಲ್ ಭಾರದ್ವಾಜ್ ನಿರ್ದೇಶಿಸುತ್ತಿರುವ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹಾಗೆಯೇ ರಣವೀರ್ ತಾವು ಝೋಯಾ ಅಖ್ತರ್ ನಿರ್ದೇಶಿಸುತ್ತಿರುವ ಗಲ್ಲಿ ಬಾಯ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರುಗಳ ವಿವಾಹದ ದಿನಾಂಕವನ್ನು ನಿಖರವಾಗಿ ತಿಳಿದುಕೊಳ್ಳಲು ಅಭಿಮಾನಿಗಳು ಇನ್ನೂ ಕೊಂಚ ಸಮಯ ತಾಳ್ಮೆಯಿಂದ ಕಾಯಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics